alex Certify ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಖುಷಿ ಸುದ್ದಿ..! ಪ್ರಮುಖ ಬದಲಾವಣೆಗಳೊಂದಿಗೆ ಬರಲಿದೆ ಟಾಟಾ ನೆಕ್ಸಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಖುಷಿ ಸುದ್ದಿ..! ಪ್ರಮುಖ ಬದಲಾವಣೆಗಳೊಂದಿಗೆ ಬರಲಿದೆ ಟಾಟಾ ನೆಕ್ಸಾನ್

ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗುತ್ತಲೇ ಇದೆ. ಇದರ ಪರಿಣಾಮವಾಗಿ ಕಳೆದ ಒಂದೆರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿ ಮಾಡುತ್ತಿದ್ದಾರೆ. ಹಾಗಾಗಿ ಟಾಟಾ ಕಂಪನಿ ತನ್ನ ಇಲೆಕ್ಟ್ರಿಕ್ ಕಾರಿನ ಗುಣಮಟ್ಟವನ್ನು ಹೆಚ್ಚಿಸಲು ಮುಂದಾಗಿದೆ.

ಟಾಟಾ ಕಂಪನಿ ತನ್ನ ಹೊಸ ಮಾಡೆಲ್ ನೆಕ್ಸಾನ್ ಇವಿ ಕಾರನ್ನು 2020 ರಲ್ಲಿ ಬಿಡುಗಡೆ ಮಾಡಿತ್ತು. ಈ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳಲ್ಲಿ ಪ್ರಮುಖವಾಗಿದೆ. ಆದರೆ ಈ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಕಡಿಮೆ ಇದ್ದ ಕಾರಣ ಕಾರಿಗೆ ಸ್ವಲ್ಪ ಹಿನ್ನಡೆಯಾಗಿತ್ತು. ಒಮ್ಮೆ ಚಾರ್ಜ್ ಮಾಡಿದರೆ ಕೇವಲ 150-200 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತು. ಇದೀಗ ಅದೇ ಕಾರಿನ ಹೊಸ ಆವೃತ್ತಿ ಬಿಡುಗಡೆ ಮಾಡಲಿದೆ.

ಇದು ಹೆಚ್ಚಿನ ಮೈಲೇಜ್ ಹಾಗೂ ಉತ್ಕೃಷ್ಟ ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 312 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ. ಕೇವಲ 60 ನಿಮಿಷಗಳಲ್ಲಿ 70 ಪರ್ಸೆಂಟ್ ಚಾರ್ಜ್ ಮಾಡಬಹುದು. ಪೂರ್ತಿ ಚಾರ್ಜ್ ಮಾಡಲು 2 ಗಂಟೆ ತೆಗೆದುಕೊಳ್ಳುತ್ತದೆ. ಇದಲ್ಲದೆ ಟಾಟಾ ಮೋಟಾರ್ಸ್ ಈ ಮಾಡೆಲ್ ನಲ್ಲಿ ಡಬಲ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸ್ಟ್ರಾಂಗ್ ಚಾಸಿಸ್ ಸುರಕ್ಷತೆ ಹೆಚ್ಚಿಸಿದೆ. ಇದರ ಬೇಸಿಕ್ ಮಾಡೆಲ್ ಬೆಲೆ 13 ಲಕ್ಷ 99 ಸಾವಿರ ರೂಪಾಯಿಯಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...