alex Certify ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂದೇ ಬಿಡ್ತು ಟಾಟಾ ಮೋಟಾರ್ಸ್ ನ ಹೊಸ ವೆಹಿಕಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂದೇ ಬಿಡ್ತು ಟಾಟಾ ಮೋಟಾರ್ಸ್ ನ ಹೊಸ ವೆಹಿಕಲ್

Tata Ace EV launched, MoU for delivery of 39,000 units signed - Auto News

ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆಗಿರೋ ಸ್ಥಾನಗಳಿಸಿರೋ ಮೋಟಾರ್ಸಂಸ್ಥೆ. ಇದೇ ಕಂಪನಿ ಈಗ ಮಾರುಕಟ್ಟೆಗೆ ಸಣ್ಣ ಗಾತ್ರದ ಏಸ್ ಎಲೆಕ್ಟ್ರಿಕಲ್ ವಾಹನ ಬಿಡುಗಡೆ ಮಾಡಿದೆ.

ಇದು ಈಗಾಗಲೇ ಜನಪ್ರಿಯಗೊಂಡಿರೋ ಎಸ್ ಟ್ರಕ್ ನ ಎಲೆಕ್ಟ್ರಿಕಲ್ ಆವೃತ್ತಿಯಾಗಿದೆ. ಈ ವಾಹನದ ಸ್ಪೆಷಾಲಿಟಿ ಏನಂದ್ರೆ, ದೇಶದಲ್ಲಿ ಸರಕು ಸರಬರಾಜು ಮಾಡುವ ಸಣ್ಣ ಇಲೆಕ್ಟ್ರಿಕ್ ಟ್ರಕ್ ಗಳ ಉತ್ಪಾದನಾ ಕ್ಷೇತ್ರಕ್ಕೆ ಹೇಳಿ ಮಾಡಿಸದಂತಿದೆ.

ಟಾಟಾ ಮೋಟಾರ್ಸ್ ಪ್ರಕಾರ ಈ ಹೊಚ್ಚ ಹೊಸ ವೆಹಿಕಲ್, ಶೂನ್ಯ ಹೊಗೆ ಸೊಸುವಿಕೆ ವಾಹನವಾಗಿದ್ದು, ನಾಲ್ಕು ಚಕ್ರದ ಸಣ್ಣ ವಾಹನವಾಗಿದೆ. ಇದು ಚಿಕ್ಕ-ಪುಟ್ಟ ವ್ಯಾಪಾರ ಮಾಡುವವರಿಗೆ ಹೇಳಿ ಮಾಡಿಸಿದಂತಿದೆ. ಎಂದು ಕಾರ್ಯ ನಿರ್ವಾಹಕ ನಿರ್ದೆಶಕ ಗಿರೀಶ್ ವಾಘ್ ಹೇಳಿದ್ದಾರೆ.

BIG BREAKING: PSI ಅಕ್ರಮ ಕೇಸ್ ನಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ವಶಕ್ಕೆ

ಈ ಹೊಸ ಇಲೆಕ್ಟ್ರಿಕ್ ವಾಹನ ಟಾಟಾ ಮೋಟಾರ್ಸ್ನ EVOGEN ಪವರ್ ಟ್ರೈನ್ ಒಳಗೊಂಡ ಮೊದಲ ಉತ್ಪನ್ನವಾಗಿದ್ದು, ಇದು 150 ಕಿಲೋಮೀಟರ್ ದೂರ ಸಂಚರಿಸಬಲ್ಲದು. ಏಸ್ ವಿದ್ಯುತ್ ಚಾಲಿತ ವಾಹನದಲ್ಲಿ ಅತ್ಯಾಧುನಿಕ ಬ್ಯಾಟರಿ ಕೂಲಿಂಗ್ ವ್ಯವಸ್ಥೆ ಹಾಗೂ ಚಾಲನೆಯ ದೂರ ಹೆಚ್ಚಿಸಲು ನೆರವಾಗುವ ಬ್ರೇಕಿಂಗ್ ಸಿಸ್ಟಂ ಹೊಂದಿದೆ. ಇದೆಲ್ಲದರ ಹೊರತಾಗಿ ಏಸ್ ವಾಹನ ನಿಯಮಿತ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯ ಸಹ ಒಳಗೊಂಡಿದೆ.

ಈ ಹೊಸ ಇವಿ ವಾಹನ 18kWh ಮತ್ತು 20KWh ಸಾಮರ್ಥ್ಯದ ನಡುವಿನ ಬ್ಯಾಟರಿಯನ್ನ ಅಳವಡಿಸಲಾಗಿದೆ. ಆದರೆ ಎಲೆಕ್ಟ್ರಿಕಲ್ ವಾಣಿಜ್ಯ ಬಳಕೆ ವಾಹನದ ಬೆಲೆ ಎಷ್ಟೆಂದು ಇನ್ನೂ ಬಹಿರಂಗ ಮಾಡಿಲ್ಲ. ಆದರೂ ಭಾರತದಲ್ಲಿ ಈ ವಾಹನಕ್ಕೆ ಈಗಾಗಲೇ ಬೇಡಿಕೆ ಹೆಚ್ಚಾಗಿದ್ದು, 2024ರ ವೇಳೆಗೆ ಏನಿಲ್ಲ ಅಂದರೂ 6-7 ಬಿಲಿಯನ್ ಡಾಲರ್ನಷ್ಟು ವಹಿವಾಟು ಮಾಡೋ ಲೆಕ್ಕಾಚಾರ ಟಾಟಾ ಕಂಪನಿ ಮಾಡಿದೆ.

ಸರಕು ಸಾಗಣೆಯ ಉದ್ದೇಶದಿಂದಾಗಿಯೇ 2005ರಲ್ಲಿ ಏಸ್ ವಾಹನ ಮಾರುಕಟ್ಟೆಗೆ ಬಂದಿದ್ದು, ಇದೀಗ 17 ವರ್ಷಗಳ ನಂತರ ಇಲೆಕ್ಟ್ರಿಕ್ ರೂಪಾಂತರ ಹೊಂದಿ ಮತ್ತೆ ಮಾರುಕಟ್ಟೆಗೆ ಬರುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...