alex Certify ಬಳಸಿದ ಸಾಕ್ಸ್‌ ಮಾರಾಟ ಮಾಡುವ ಮೂಲಕ ಈ ವ್ಯಕ್ತಿ ತಿಂಗಳಿಗೆ ಗಳಿಸುವ ಹಣವೆಷ್ಟು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಸಿದ ಸಾಕ್ಸ್‌ ಮಾರಾಟ ಮಾಡುವ ಮೂಲಕ ಈ ವ್ಯಕ್ತಿ ತಿಂಗಳಿಗೆ ಗಳಿಸುವ ಹಣವೆಷ್ಟು ಗೊತ್ತಾ..?

Sweatier the Better': UK Man Makes Rs 1.5 Lakh a Month Selling Used Socks  Onlineಆನ್ಲೈನ್‍ನಲ್ಲಿ ಸಿಗುವ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸಲು ಜನರು ಮುಗಿ ಬೀಳುತ್ತಾರೆ. ಮನೆಗೆ ಬೇಕಾಗಿರೋ ಸಾಮಾಗ್ರಿಗಳಿಂದ ಹಿಡಿದು ಎಲ್ಲವೂ ಆನ್ಲೈನ್ ನಲ್ಲಿ ಸಿಗುತ್ತದೆ. ಇದೀಗ ವಿಲಕ್ಷಣ ಪ್ರಕರಣವೊಂದರಲ್ಲಿ ಬಳಸಿದ ಸಾಕ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ವ್ಯಕ್ತಿಯೊಬ್ಬರು ತಿಂಗಳಿಗೆ ರೂ 1.5 ಲಕ್ಷ ಗಳಿಸುತ್ತಾರೆ.

ಯುಕೆಯ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಬಳಸಿದ ಸಾಕ್ಸ್‌ಗಳನ್ನು ಮಾರಾಟ ಮಾಡುತ್ತಿದ್ದು, ಲಕ್ಷಕ್ಕೂ ಅಧಿಕ ಹಣ ಗಳಿಸುತ್ತಿದ್ದಾರೆ. 25 ವರ್ಷದ ವ್ಯಕ್ತಿ, ಬಿಲ್ಲಿ-ಜೋಯ್ ಗ್ರೇ, ಲಾಭದಾಯಕ ಆನ್‌ಲೈನ್ ವ್ಯಾಪಾರವನ್ನು ನಡೆಸುತ್ತಿದ್ದಾರೆ. ತನ್ನ ದುರ್ವಾಸನೆಯ ಸಾಕ್ಸ್‌ಗಳನ್ನು ಪ್ರತಿ ಜೋಡಿಗೆ 900 ರಿಂದ 2,900 ರೂ.ಗಳಿಗೆ ಮಾರಾಟ ಮಾಡುತ್ತಾರೆ. ಅಸಹ್ಯಕರ ಸಾಕ್ಸ್‌ಗಳನ್ನು ಖರೀದಿಸಲು ಯಾರು ಹಣವನ್ನು ಖರ್ಚು ಮಾಡುತ್ತಾರೆ ಎಂದು ನೀವು ಯೋಚಿಸುತ್ತಿರಬಹುದು. ಅದಕ್ಕೆಂದೇ ಸಂಪೂರ್ಣ ಮಾರುಕಟ್ಟೆ ಇದೆ ಅಂತಾ ಗ್ರೇ ಹೇಳುತ್ತಾರೆ.

ಅಷ್ಟೇ ಅಲ್ಲ ಗ್ರೇ ತನ್ನ ಗ್ರಾಹಕರ ಗೌಪ್ಯತೆಯನ್ನು ಸಹ ಕಾಪಾಡಿಕೊಳ್ಳುತ್ತಾನೆ. ಸಲಿಂಗಕಾಮಿ ಸಮುದಾಯ ಜನ ಈತನ ಬಹುಪಾಲು ಗ್ರಾಹಕರಂತೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ, ವಿಶೇಷವಾಗಿ ಇನ್ಸ್ಟಾಗ್ರಾಂನಲ್ಲಿ ವ್ಯಾಪಾರವು ಅಭಿವೃದ್ಧಿ ಹೊಂದುತ್ತದೆ ಎಂದು ಗ್ರೇ ಹೇಳಿಕೊಳ್ಳುತ್ತಾರೆ. ಪ್ರತಿ ವಾರ 5 ರಿಂದ 12 ಜೋಡಿ ಸಾಕ್ಸ್‌ಗಳನ್ನು ಮಾರಾಟ ಮಾಡುತ್ತಿದ್ದು, ಸುಲಭವಾಗಿ ತಿಂಗಳಿಗೆ 1.5 ಲಕ್ಷ ರೂ. ಹಣವನ್ನು ಗಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...