alex Certify ವಿಮಾನದೊಳಗೆ ‘ಚಕಾ ಚಕ್’ ಹಾಡಿಗೆ ಸೊಂಟ ಬಳುಕಿಸಿದ ಗಗನಸಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದೊಳಗೆ ‘ಚಕಾ ಚಕ್’ ಹಾಡಿಗೆ ಸೊಂಟ ಬಳುಕಿಸಿದ ಗಗನಸಖಿ

WATCH: SpiceJet Air Hostess Grooves to Sara Ali Khan's 'Chaka Chak' in Empty  Flightಸ್ಪೈಸ್ ಜೆಟ್ ಏರ್ ಹೋಸ್ಟೆಸ್ ಉಮಾ ಮೀನಾಕ್ಷಿ ನೆನಪಿದೆಯೇ? ನವ್ರಾಯ್ ಮಾಝಿಗೆ ಕುಣಿದಿದ್ದ ಅವರ ಹಿಂದಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. ಈ ಬಾರಿ ಅವರು ಮತ್ತೊಂದು ಹೊಸ ವಿಡಿಯೋದೊಂದಿಗೆ ಮರಳಿದ್ದಾರೆ.

ನಟಿ ಸಾರಾ ಅಲಿ ಖಾನ್ ಅವರ ಚಕಾ ಚಕ್‌ಗೆ ಗಗನಸಖಿ ನೃತ್ಯ ಮಾಡಿದ್ದು, ಈ ವಿಡಿಯೋವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸಾರಾಳ ಅತ್ರಾಂಗಿ ರೇ ಚಿತ್ರದ ಹಾಡಾಗಿದೆ. ಇದೀಗ ಗಗನಸಖಿ ಈ ಹಾಡಿಗೆ ಸೊಂಟ ಬಳುಕಿಸಿದ್ದು, ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಉಮಾ ಅವರು ಪ್ರಯಾಣಿಕರಿಲ್ಲದೆ ಇರುವಾಗ ವಿಮಾನದೊಳಗೆ ಚಕಾ ಚಕ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಆಕೆಯ ಸಹೋದ್ಯೋಗಿಯೊಬ್ಬರು ಉಮಾ ನೃತ್ಯ ಮಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಇದೀಗ ಗಗನಸಖಿ ಮಾಡಿರುವ ಈ ನೃತ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಕಾ ಚಕ್ ಹಾಡನ್ನು ಎ.ಆರ್. ರೆಹಮಾನ್ ಸಂಯೋಜಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ. ಶ್ರೇಯಾ ಘೋಷಾಲ್ ಇದಕ್ಕೆ ಧ್ವನಿ ನೀಡಿದ್ದಾರೆ. ಇರ್ಷಾದ್ ಕಾಮಿಲ್ ಅವರ ಸಾಹಿತ್ಯವಿದೆ. ಚಕಾ ಚಕಾ ಹಾಡನ್ನು ಜನರು ಇಷ್ಟಪಟ್ಟಿದ್ದು, ಇನ್ನೇನು ಶ್ರೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...