alex Certify ಕೇವಲ 25 ಸಾವಿರ ರೂಪಾಯಿಗೆ ಸಿಗ್ತಿದೆ ಹೀರೋ ಮೆಸ್ಟ್ರೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 25 ಸಾವಿರ ರೂಪಾಯಿಗೆ ಸಿಗ್ತಿದೆ ಹೀರೋ ಮೆಸ್ಟ್ರೋ

ಸೆಕೆಂಡ್ ಹ್ಯಾಂಡ್ ಸ್ಕೂಟರ್ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿಯಿದೆ. ಹೀರೋ ಮೆಸ್ಟ್ರೋ ಕೈಗೆಟಕುವ ಬೆಲೆಗೆ ಗ್ರಾಹಕರಿಗೆ ಸಿಗ್ತಿದೆ. ಹೀರೋ ಮೆಸ್ಟ್ರೋ ದೀರ್ಘ ಮೈಲೇಜ್ ಸ್ಕೂಟರ್ ಆಗಿದ್ದು, ಉತ್ತಮ ವಿನ್ಯಾಸ ಮತ್ತು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಕೂಟರ್, ಕೇವಲ 25 ಸಾವಿರ ರೂಪಾಯಿಗೆ ಗ್ರಾಹಕರಿಗೆ ಸಿಗ್ತಿದೆ.

ಸ್ಟೈಲಿಶ್ ಹೀರೋ ಮೆಸ್ಟ್ರೋ ಸ್ಕೂಟರ್ ಗೆ ಒಂದು ವರ್ಷದ ವಾರಂಟಿ ನೀಡಲಾಗ್ತಿದೆ. ಶೋರೂಮ್ ನಲ್ಲಿ ಈ ಸ್ಕೂಟರ್ ಬೆಲೆ 60 ಸಾವಿರ ರೂಪಾಯಿಗಳಿಗಿಂತ ಹೆಚ್ಚಿದೆ. ಆದ್ರೆ ಕೆಲ ಡೀಲರ್ ಸಹಾಯದಿಂದ 25 ಸಾವಿರಕ್ಕೆ ಸ್ಕೂಟರ್ ಖರೀದಿಸಬಹುದು.

ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಖರೀದಿ-ಮಾರಾಟ ವೆಬ್‌ಸೈಟ್ BIKES24 ನಲ್ಲಿ ಈ ಸ್ಕೂಟರನ್ನು  ಕೇವಲ 25 ಸಾವಿರ ರೂಪಾಯಿಗೆ ಖರೀದಿಸಬಹುದು.  ಇದು ಸೆಕೆಂಡ್ ಹ್ಯಾಂಡ್ ಸ್ಕೂಟರ್ ಆಗಿದ್ದು, ಇದು 2014 ರ ಮಾದರಿಯಾಗಿದೆ. ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಫೋಟೋ ಉತ್ತಮ ಸ್ಥಿತಿಯಲ್ಲಿದೆ.

ಫೋಟೋದಲ್ಲಿ ತೋರಿಸಲಾಗಿರುವ ಹೀರೋ ಮೆಸ್ಟ್ರೋ ಸ್ಕೂಟರ್ 6600 ಕಿಲೋಮೀಟರ್ ಕ್ರಮಿಸಿದೆ. 12 ತಿಂಗಳ ವಾರಂಟಿ ಮತ್ತು 7 ದಿನಗಳ ಕ್ಯಾಶ್‌ಬ್ಯಾಕ್ ಆಯ್ಕೆ ಇದ್ರಲ್ಲಿ ಸಿಗ್ತಿದೆ. ಹೀರೋ ಮೆಸ್ಟ್ರೋ 109 ಸಿಸಿ ಎಂಜಿನ್ ಹೊಂದಿದೆ. ಇದು ಏರ್-ಕೂಲ್ಡ್ ತಂತ್ರಜ್ಞಾನವನ್ನು ಆಧರಿಸಿದ ಎಂಜಿನ್ ಆಗಿದೆ. ಈ ಎಂಜಿನ್ 8.05 Bhp ಪವರ್ ಮತ್ತು 9.10 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...