alex Certify ಚಾರಣ ಪ್ರಿಯರಿಗೆ ಇಷ್ಟವಾಗುವ ಸ್ಥಳ ಸಾವನದುರ್ಗ ಬೆಟ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾರಣ ಪ್ರಿಯರಿಗೆ ಇಷ್ಟವಾಗುವ ಸ್ಥಳ ಸಾವನದುರ್ಗ ಬೆಟ್ಟ

ವೀಕೆಂಡ್​ಗೊಂದು ಒಳ್ಳೆಯ ಜಾಗ ಹುಡುಕಬೇಕು ಅಂತಿದ್ರೆ ರಾಜಧಾನಿ ಬೆಂಗಳೂರಿನಿಂದ ಕೇವಲ 33 ಕಿಲೋಮೀಟರ್​ ದೂರದಲ್ಲಿರೋ ಸಾವನದುರ್ಗಕ್ಕೆ ನೀವು ಭೇಟಿ ನೀಡಬಹುದು. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ ಎಂಬ ಖ್ಯಾತಿ ಈ ಸ್ಥಳಕ್ಕಿದೆ. ಇದು ಮಾತ್ರವಲ್ಲದೇ ಡೇವಿಡ್ ಲೀನ್‌ನ ಚಲನಚಿತ್ರ ಎ ಪಾಸೇಜ್ ಟು ಇಂಡಿಯಾದ ಚಿತ್ರೀಕರಣವನ್ನೂ ಇಲ್ಲಿ ಮಾಡಲಾಗಿದೆ.

ಸಾವನದುರ್ಗ ಬೆಟ್ಟಕ್ಕೆ ಸ್ಥಳೀಯರು ಕರಿಗುಡ್ಡ ಹಾಗೂ ಬಿಳಿ ಗುಡ್ಡ ಎಂತಲೂ ಕರೀತಾರೆ. ಇದು ಹೊಯ್ಸಳ ಕಾಲದ ಬೆಳಕಿಗೆ ಬಂದ ಬೆಟ್ಟ ಎಂದು ಹೇಳಲಾಗುತ್ತೆ. ಮಾಗಡಿ ಗವರ್ನರ್​ ಆಗಿದ್ದ ಸಾಮಂತರಾಯನಿಗೆ ಸೇರಿದ ಸಾಮಂತದುರ್ಗದಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತೆ. ಮೈಸೂರು ಈ ಸ್ಥಳವನ್ನ ವಶಪಡಿಸಿಕೊಂಡ ಬಳಿಕ ದಳವಾಯಿ ದೇವರಾಜ ನೆಲಪಟ್ಟಣದಲ್ಲಿ ಅರಮನೆ ನಿರ್ಮಿಸಿದ್ದರು. ಮೂರನೇ ಆಂಗ್ಲೋ – ಮೈಸೂರು ಯುದ್ಧದ ಸಂಭ್ರಮದಲ್ಲಿ ರಾಬರ್ಟ್ ಹೋಮ್ ಇದಕ್ಕೆ ಸಾವಿನದುರ್ಗ( ಫೋರ್ಟ್​ ಆಫ್​ ಡೆತ್​) ಎಂದು ಕರೆದಿದ್ದಾರೆ.

ಸಾವನದುರ್ಗ ಬೆಟ್ಟಕ್ಕೆ ಯಾತ್ರಾರ್ಥಿಗಳು ಭೇಟಿ ಕೊಡ್ತಾನೇ ಇರ್ತಾರೆ. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರೇಶ್ವರ ಸ್ವಾಮಿ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನವಿದೆ. ಬೆಟ್ಟದ ನಿರ್ಮಲ ವಾತಾವರಣ ಪ್ರವಾಸಿಗರಿಗೆ ಮುದ ನೀಡುತ್ತದೆ.

ಬೆಂಗಳೂರಿನ ಮೆಜೆಸ್ಟಿಕ್​​ನಿಂದ ಮಾಗಡಿ ರಸ್ತೆಗೆ ಹೋಗುವ ಬಸ್​​​ನಲ್ಲಿ ಪ್ರಯಾಣಿಸುವ ಮೂಲಕ ಈ ಜಾಗಕ್ಕೆ ತಲುಪಬಹುದು. ಮಾಗಡಿ ರಸ್ತೆ ಜಂಕ್ಷನ್​​ನಲ್ಲಿ ಇಳಿದು ಸಾವನದುರ್ಗಕ್ಕೆ ಹೋಗಲು ಖಾಸಗಿ & ಕೆಎಸ್​ಆರ್​​ಟಿಸಿ ಬಸ್​ಗಳು ಸಿಗುತ್ತವೆ. ಬೆಂಗಳೂರಿನಿಂದ 2 ಗಂಟೆ ಪ್ರಯಾಣಿಸಿದ್ರೆ ನೀವು ಈ ಸ್ಥಳಕ್ಕೆ ತಲುಪಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...