alex Certify ಗರ್ಭಪಾತವಾದ ಕಾರಣಕ್ಕೆ ಜೈಲು ಪಾಲಾಗಿದ್ದ ಮಹಿಳೆ ಕೊನೆಗೂ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಪಾತವಾದ ಕಾರಣಕ್ಕೆ ಜೈಲು ಪಾಲಾಗಿದ್ದ ಮಹಿಳೆ ಕೊನೆಗೂ ಬಿಡುಗಡೆ

ಗರ್ಭಪಾತ ಮಾಡಿಸಿಕೊಂಡ ಕಾರಣಕ್ಕೆ 30 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಲ್ ಸಲ್ವಡೋರ್‌ನ ಮಹಿಳೆಯೊಬ್ಬರು, 10 ವರ್ಷಗಳ ಬಳಿಕ ಬಂಧಮುಕ್ತರಾಗಿದ್ದಾರೆ.

ಸಾರಾ ರೋಗೆಲ್ ಹಸರಿನ ಈ ಮಹಿಳೆ, ಮನೆಗೆಲಸ ಮಾಡುತ್ತಿದ್ದ ವೇಳೆ ರಕ್ತಸ್ರಾವದ ಸಮಸ್ಯೆಯಿಂದಾಗಿ ಅಕಸ್ಮಾತ್‌ ಆಗಿ ಆದ ಗರ್ಭಪಾತದ ಕಾರಣ ಅಕ್ಟೋಬರ್‌ 2012ರಲ್ಲಿ ಬಂಧಿತರಾಗಿದ್ದರು. ಇನ್ನೂ ಹುಟ್ಟದೇ ಇರುವ ಮಗುವನ್ನು ಕೊಂದಿದ್ದಾರೆ ಎಂಬ ಆರೋಪದ ಮೇಲೆ ಸಾರಾಗೆ ಶಿಕ್ಷೆ ವಿಧಿಸಲಾಗಿತ್ತು.

“ಸಾರಾ ಜೈಲಿಗೆ ಹೋಗುವ ತಪ್ಪು ಮಾಡಿಲ್ಲ. ತನ್ನ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದ ಆಕೆ ತನ್ನ ಕುಟುಂಬದೊಂದಿಗೆ ಇರಬೇಕಿತ್ತು. ಆದರೆ ಆಕೆಯನ್ನು ಅನ್ಯಾಯವಾಗಿ ಒಂಬತ್ತು ವರ್ಷಗಳ ಕಾಲ ಸೆರೆವಾಸದಲ್ಲಿಡಲಾಯಿತು” ಎಂದು ಮಹಿಳಾಪರ ಹೋರಾಟಗಾತಿ ಮೊರೆನಾ ಹೆರ‍್ರೆರಾ ತಿಳಿಸಿದ್ದಾರೆ.

ಮಾರಣಾಂತಿಕ ಕಾಯಿಲೆಯಿಂದ ಬಚಾವಾಗಲು ಭಾರತೀಯರು ನೆನಪಿನಲ್ಲಿಡಬೇಕಿದೆ ಈ ಅಂಶ

ರಾಜಧಾನಿ ಸ್ಯಾನ್ ಸಲ್ವಡಾರ್‌ನಿಂಧ 56ಕಿಮೀ ಆಗ್ನೇಯಕ್ಕಿರುವ ಝಕಾಟಿಕೋಲುಕಾದ ಜೈಲಿನಿಂದ ಸಾರಾರನ್ನು ಬಿಡುಗಡೆ ಮಾಡಲಾಯಿತು.

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಗರ್ಭಪಾತದ ವಿರುದ್ಧ ಅತ್ಯಂತ ಕಠಿಣ ಕಾನೂನುಗಳನ್ನು ಹೊಂದಿರುವ ಎಲ್‌ ಸಲ್ವಡಾರ್‌ನಲ್ಲಿ ಅತ್ಯಾಚಾರದ ಪ್ರಕರಣಗಳಲ್ಲೂ ಸಹ ಗರ್ಭಪಾತಕ್ಕೆ ಅವಕಾಶವಿಲ್ಲ. ತಾಯಂದಿರ ಜೀವಕ್ಕೇ ಕುತ್ತು ಎನ್ನುವ ಸನ್ನಿವೇಶದಲ್ಲೂ ಗರ್ಭಪಾತ ಮಾಡಿದಲ್ಲಿ 40 ವರ್ಷಗಳ ಕಾಲ ಸೆರೆವಾಸದ ಶಿಕ್ಷೆ ನೀಡುವ ಅವಕಾಶವಿದೆ.

ಇತ್ತೀಚಿನ ದಿನಗಳಲ್ಲಿ ಒಂದಷ್ಟು ಶಿಕ್ಷೆಗಳನ್ನು ಹಿಂಪಡೆದಿದ್ದು, ಸುದೀರ್ಘಾವಧಿಯ ಜೈಲುಶಿಕ್ಷೆ ಅನುಭವಿಸುತ್ತಿದ್ದ ಕೆಲವು ಮಹಿಳೆಯರನ್ನು ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...