alex Certify ಮನೆ, ಸೈಟ್, ಜಮೀನು ಖರೀದಿದಾರರಿಗೆ ಶಾಕಿಂಗ್ ನ್ಯೂಸ್: ಮಾರ್ಗಸೂಚಿ ದರ ಶೇ. 30ರಷ್ಟು ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ, ಸೈಟ್, ಜಮೀನು ಖರೀದಿದಾರರಿಗೆ ಶಾಕಿಂಗ್ ನ್ಯೂಸ್: ಮಾರ್ಗಸೂಚಿ ದರ ಶೇ. 30ರಷ್ಟು ಹೆಚ್ಚಳ

ಬೆಂಗಳೂರು: ಸ್ಥಿರಾಸ್ತಿ ಖರೀದಿ ದರ ದುಬಾರಿ ಆಗಲಿದೆ. ಮಾರ್ಗಸೂಚಿ ಬೆಲೆ ಶೇಕಡ 30ರಷ್ಟು ಹೆಚ್ಚಳವಾಗಲಿದ್ದು, ಅಕ್ಟೋಬರ್ 1ರಿಂದ ಹೊಸ ದರ ಜಾರಿಗೆ ಬರಲಿದೆ.

ಜಮೀನು, ನಿವೇಶನ, ಮನೆ ಖರೀದಿ ಮಾಡುವ ಉದ್ದೇಶವಿದ್ದಲ್ಲಿ ಕೂಡಲೇ ಖರೀದಿ ಪ್ರಕ್ರಿಯೆ ಪೂರ್ಣ ಮಾಡುವುದು ಒಳ್ಳೆಯದು. ಅಕ್ಟೋಬರ್ ನಿಂದ ಸ್ಥಿರಾಸ್ತಿಗಳ ಬೆಲೆ ಹೆಚ್ಚಳ ಆಗಲಿದೆ. ಮಾರ್ಗಸೂಚಿ ಬೆಲೆ 0ಯಿಂದ ಶೇಕಡ 90ರ ವರೆಗೆ ಹೆಚ್ಚಳವಾಗಲಿದ್ದು, ಒಟ್ಟಾರೆ ಸರಾಸರಿ ಶೇಕಡ 30ರಷ್ಟು ಹೆಚ್ಚಳವಾಗಲಿದೆ.

ಸರ್ಕಾರ ತಾತ್ಕಾಲಿಕ ಮಾರ್ಗಸೂಚಿದರ ಪ್ರಕಟಿಸಲಿದ್ದು, 15 ದಿನ ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಲಾಗುವುದು. ಅಕ್ಟೋಬರ್ 1ರಿಂದ ನೂತನ ದರ ಜಾರಿಗೆ ಬರಲಿದೆ. 5 ವರ್ಷಗಳ ನಂತರ ಮಾರ್ಗ ಸೂಚಿ ದರ ಪರಿಷ್ಕರಣೆ ಮಾಡಲಾಗುತ್ತಿದ್ದು, ಎಲ್ಲಾ ಉಪನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ, ಮಾರ್ಗಸೂಚಿ ದರಗಳನ್ನು 5 ವರ್ಷಗಳ ಅವಧಿಯಲ್ಲಿ ಪರಿಷ್ಕರಣೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿ ದರ ಪರಿಷ್ಕರಿಸಲಾಗುವುದು. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ನಿರೀಕ್ಷೆ ಇದೆ. ಆದರೆ, ಮಾರ್ಗಸೂಚಿ ದರ ಹೆಚ್ಚಳದಿಂದ ನೋಂದಣಿ ಕಡಿಮೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...