alex Certify ಈ ಶೈಕ್ಷಣಿಕ ವರ್ಷದಿಂದಲೇ ಪಠ್ಯದಿಂದ ಹಿಂದುತ್ವ ವಿಷಯಗಳಿಗೆ ಕೊಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಶೈಕ್ಷಣಿಕ ವರ್ಷದಿಂದಲೇ ಪಠ್ಯದಿಂದ ಹಿಂದುತ್ವ ವಿಷಯಗಳಿಗೆ ಕೊಕ್

ನವದೆಹಲಿ: NCERT 11, 12ನೇ ತರಗತಿ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದ್ದುಮ ಕೇಂದ್ರೀಯ ಪಠ್ಯದಿಂದ ಬಾಬ್ರಿ ಮಸೀದಿ, ಗುಜರಾತ್ ಹಿಂಸೆಗೆ ಕೊಕ್ ನೀಡಲಾಗಿದೆ.

2024 -25 ನೇ ಸಾಲಿನ ಶೈಕ್ಷಣಿಕ ವರ್ಷದ 11 ಮತ್ತು 12ನೇ ತರಗತಿ ಪಠ್ಯಪುಸ್ತಕದಿಂದ ಗುಜರಾತ್ ಗಲಭೆ, ಬಾಬ್ರಿ ಮಸೀದಿ ಧ್ವಂಸ, ಹಿಂದುತ್ವ ಸೇರಿದಂತೆ ಹಲವು ಅಂಶಗಳನ್ನು NCERT ಕೈಬಿಟ್ಟಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. 370ನೇ ವಿಧಿ ರದ್ದು ಕುರಿತ ವಿಷಯವನ್ನು ಸೇರ್ಪಡೆ ಮಾಡಲಾಗಿದೆ.

11 ಮತ್ತು 12ನೇ ತರಗತಿ ರಾಜಕೀಯ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಸ್ತಕಗಳಲ್ಲಿ ಬದಲಾವಣೆ ಮಾಡಿ ಪರಿಷ್ಕೃತ ಪಠ್ಯ ಪ್ರಕಟಿಸಲಾಗಿದೆ. ಪುಸ್ತಕದಿಂದ ಕೈಬಿಟ್ಟಿರುವ ಅಂಶಗಳ ಕುರಿತಾಗಿ NCERT ಅಧಿಕೃತ ಹೇಳಿಕೆ ನೀಡಿಲ್ಲವಾದರೂ ವಾರ್ಷಿಕ ನವೀಕರಣದ ಭಾಗವಾಗಿ ಈ ಬದಲಾವಣೆ ಮಾಡಲಾಗಿದೆ.

11ನೇ ತರಗತಿಯ ಅಧ್ಯಾಯ 8 ರಲ್ಲಿ ಅಯೋಧ್ಯ ಬಾಬರಿ ಮಸೀದಿ ಧ್ವಂಸ, ಹಿಂದುತ್ವ ರಾಜಕೀಯ ಉಲ್ಲೇಖಗಳನ್ನು ಕೈ ಬಿಡಲಾಗಿದೆ. 2002ರಲ್ಲಿ ಗುಜರಾತ್ ನಲ್ಲಿ ಗೋದ್ರಾ ನಂತರದ ಗಲಭೆಗಳ ಸಮಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಹೆಚ್ಚಾಗಿ ಮುಸ್ಲಿಮರನ್ನು ಕಗ್ಗೊಲೆ ಮಾಡಲಾಗಿತ್ತು ಎಂದು ಬರೆಯಲಾಗಿತ್ತು. ಅದನ್ನು ಈಗ ಒಂದು ಸಾವಿರಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು ಎಂದು ಬದಲಿಸಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ, ಮಣಿಪುರ ಒಪ್ಪಂದ ವಿಷಯದ ಕುರಿತ ಪಠ್ಯಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...