alex Certify ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕಿದ್ಯಾರು ಗೊತ್ತಾ…? ಉದ್ಯೋಗ, ತರಬೇತಿಗೆ ಬಂದ ಯುವತಿಯರ ಬಳಸಿಕೊಂಡು ದಂಧೆ ನಡೆಸ್ತಿದ್ದ ಮಹಿಳೆ ಸೇರಿ ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕಿದ್ಯಾರು ಗೊತ್ತಾ…? ಉದ್ಯೋಗ, ತರಬೇತಿಗೆ ಬಂದ ಯುವತಿಯರ ಬಳಸಿಕೊಂಡು ದಂಧೆ ನಡೆಸ್ತಿದ್ದ ಮಹಿಳೆ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಕೆಲಸದ ಆಮಿಷವೊಡ್ಡಿ ಹೊರ ರಾಜ್ಯದ ಮಹಿಳೆಯರು ಮತ್ತು ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಸೇರಿ ಮೂವರನ್ನು ಕಾಟನ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂಜಯನಗರ ನಾಗಶೆಟ್ಟಿಹಳ್ಳಿಯ ಅರ್ಚನಾ(37), ತುಮಕೂರಿನ ಮಂಜುನಾಥ(33), ದಾವಣಗೆರೆಯ ರಾಘವೇಂದ್ರ(30) ಬಂಧಿತ ಆರೋಪಿಗಳು. ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಯಲ್ಲಿ ಸಿಲುಕಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ.

ಬಳೆಪೇಟೆಯ ಕೆವಿ ಟೆಂಪಲ್ ಸ್ಟ್ರೀಟ್ ನಲ್ಲಿರುವ ಲಾಡ್ಜ್ ವೊಂದರಲ್ಲಿ ಆಕ್ರಮವಾಗಿ ಮಹಿಳೆಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಅರ್ಚನಾ ಸಂಜಯ ನಗರದಲ್ಲಿ ನರ್ಸಿಂಗ್ ಸೆಂಟರ್ ನಡೆಸುತ್ತಿದ್ದು, ನರ್ಸಿಂಗ್ ತರಬೇತಿಗೆ ಬರುವ ಯುವತಿಯರು ಮತ್ತು ಮಹಿಳೆಯರಿಗೆ ಕೆಲಸ ಹಾಗೂ ಸುಲಭವಾಗಿ ಹಣಗಳಿಸುವ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ದೂಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಳು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...