alex Certify ಪ್ಲಾಟಿನಂ ಆಭರಣಗಳೇ ಈಗ ಜನರ ಮೊದಲ ಆಯ್ಕೆ; ಚಿನ್ನದ ಬಗ್ಗೆ ಆಸಕ್ತಿ ಕಡಿಮೆಯಾಗ್ತಿರೋದ್ಯಾಕೆ ಗೊತ್ತಾ‌ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಟಿನಂ ಆಭರಣಗಳೇ ಈಗ ಜನರ ಮೊದಲ ಆಯ್ಕೆ; ಚಿನ್ನದ ಬಗ್ಗೆ ಆಸಕ್ತಿ ಕಡಿಮೆಯಾಗ್ತಿರೋದ್ಯಾಕೆ ಗೊತ್ತಾ‌ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿಚಾರ

ಸಾಮಾನ್ಯವಾಗಿ ಎಲ್ಲರೂ ಚಿನ್ನದ ಆಭರಣಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಕಷ್ಟಕಾಲದಲ್ಲಿ ನೆರವಾಗುತ್ತೆ ಅನ್ನೋ ಕಾರಣಕ್ಕೆ ಬಂಗಾರವನ್ನು ಕೂಡಿಡುತ್ತಾರೆ. ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡುವುದು ಬಹಳ ಹಿಂದಿನಿಂದ ಬಂದಿರುವ ಸಂಪ್ರದಾಯ. ಆದ್ರೀಗ ಬಂಗಾರದ ಹೊಳಪು ಕಳೆಗುಂದಿದಂತೆ ಕಾಣುತ್ತಿದೆ.

ನಗರ ಪ್ರದೇಶಗಳಲ್ಲಿ ಪ್ಲಾಟಿನಂ ಆಭರಣಗಳತ್ತ ಜನರು ಹೆಚ್ಚು ಒಲವು ತೋರುತ್ತಿದ್ದಾರೆ. ಹಳ್ಳಿಗಳಲ್ಲಿ ವಧು-ವರರಿಗೆ ಚಿನ್ನದ ಆಭರಣಗಳನ್ನು ತೊಡಿಸಲಾಗುತ್ತದೆ. ಚಿನ್ನದ ಚೈನ್, ಮಾಂಗಲ್ಯ ಸರ, ಬಳೆ, ಕಿವಿಯೋಲೆಗಳನ್ನು ನೀಡುತ್ತಾರೆ. ಆದ್ರೆ ನಗರಗಳಲ್ಲಿ ಪ್ಲಾಟಿನಂ ಟ್ರೆಂಡ್‌ ಶುರುವಾಗಿದೆ.

ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 61 ಸಾವಿರ ರೂಪಾಯಿ ದಾಟಿದೆ. ಸಣ್ಣ ಪುಟ್ಟ ಆಭರಣ ಕೂಡ ಈಗ ಬಹಳ ದುಬಾರಿಯಾಗಿದೆ. ಆದರೆ ಪ್ರತಿ 10 ಗ್ರಾಂ ಪ್ಲಾಟಿನಂ ಬೆಲೆ 25 ಸಾವಿರ ರೂಪಾಯಿ ಇದೆ. ಚಿನ್ನದ ಬೆಲೆ ಪ್ಲಾಟಿನಂ ಬೆಲೆಗಿಂತ ಸುಮಾರು ಎರಡೂವರೆ ಪಟ್ಟು ಹೆಚ್ಚು. ಚಿನ್ನದ ಬೆಲೆ ಏರಿಕೆಯಿಂದಾಗಿ ಜನರು ಪ್ಲಾಟಿನಂ ಆಭರಣಗಳತ್ತ ಮುಖ ಮಾಡುತ್ತಿದ್ದಾರೆ.

ಪ್ಲಾಟಿನಂನಿಂದ ಮಾಡಿದ ಆಭರಣಗಳಲ್ಲಿ ಬಗೆಬಗೆಯ ವಿನ್ಯಾಸಗಳು ಲಭ್ಯವಿವೆ. ಬಂಗಾರದ ಒಡವೆಗಳಲ್ಲಿ ಈ ಆಯ್ಕೆ ಅಷ್ಟಾಗಿಲ್ಲ. ಬೆಲೆಯೂ ಕಡಿಮೆ, ಚಾಯ್ಸ್‌ ಕೂಡ ಸಾಕಷ್ಟಿರುವುದರಿಂದ ಜನರು ಪ್ಲಾಟಿನಂ ಖರೀದಿಗೆ ಮುಂದಾಗುತ್ತಿದ್ದಾರೆ.

ಈ ಹಬ್ಬದ ಋತುವಿನಲ್ಲಿ ಪ್ಲಾಟಿನಂ ಆಭರಣಗಳ ವಹಿವಾಟು ಶೇ. 25 ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ. ಪ್ಲಾಟಿನಂ ಆಭರಣಗಳ ಕ್ರೇಜ್ ನಗರ ಪ್ರದೇಶಗಳಲ್ಲದೇ ಗ್ರಾಮೀಣ ಪ್ರದೇಶದಲ್ಲಿಯೂ ಹೆಚ್ಚಿದೆ. 2 ಲಕ್ಷಕ್ಕಿಂತ ಕಡಿಮೆ ಬೆಲೆಯ ಬಳೆಗಳು ಅಥವಾ ಚೈನ್‌ಗಳತ್ತ ಜನರ ಒಲವು ಹೆಚ್ಚಾಗಿದೆ. ಏಕೆಂದರೆ 2 ಲಕ್ಷಕ್ಕಿಂತ ಹೆಚ್ಚು ಬೆಲೆಯ ಆಭರಣಗಳಿಗೆ ಪ್ಯಾನ್ ಕಾರ್ಡ್ ಒದಗಿಸುವುದು ಅವಶ್ಯಕ.

ನಲವತ್ತು ಗ್ರಾಂ ಚಿನ್ನದಿಂದ ಮಾಡಿದ ಆಭರಣಗಳನ್ನು ಖರೀದಿಸಿದರೆ, 2.5 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ 40 ಗ್ರಾಂ ಪ್ಲಾಟಿನಂನಿಂದ ಮಾಡಿದ ಆಭರಣಗಳ ಬೆಲೆ 1 ಲಕ್ಷ ರೂಪಾಯಿ. ಇದನ್ನು ಖರೀದಿಸಲು ಪ್ಯಾನ್ ನೀಡಬೇಕಾಗಿಲ್ಲ. ಇನ್ನೊಂದು ವರದಿಯ ಪ್ರಕಾರ ಯುವಜನತೆಯಲ್ಲಿ ಚಿನ್ನಾಭರಣಗಳ ಬದಲಿಗೆ ಸಾವರಿನ್ ಗೋಲ್ಡ್ ಬಾಂಡ್‌ಗಳ ಬಗ್ಗೆ ಆಸಕ್ತಿ ಹೆಚ್ಚಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...