alex Certify ಯುಕೆಯ ಬಟ್ಟೆ ತ್ಯಾಜ್ಯದ ರಾಶಿ ಘಾನಾ ಬೀಚ್​ನಲ್ಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಕೆಯ ಬಟ್ಟೆ ತ್ಯಾಜ್ಯದ ರಾಶಿ ಘಾನಾ ಬೀಚ್​ನಲ್ಲಿ…!

ಪಶ್ಚಿಮ ಆಫ್ರಿಕಾದ ದೇಶವಾದ ಘಾನಾದ ಕಡಲತೀರಗಳು ಬಳಸಿದ ಬಟ್ಟೆಗಳಿಂದ ಮಲಿನಗೊಂಡಿದೆ. ಯುಕೆಯಲ್ಲಿ ಜನರು ಬಳಸಿ ಎಸೆದ ಬಟ್ಟೆಯು ಘಾನಾ ಕಡಲ ದಡಕ್ಕೆ ತಲುಪುತ್ತಿದೆ. ಇದೊಂದು ವಿಚಿತ್ರ ರೀತಿಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಯುಕೆಯ ವೇಗದ ಫ್ಯಾಷನ್​ ಉದ್ಯಮದಿಂದ ಸಮಸ್ಯೆ ಉದ್ಭವಿಸಿದೆ ಎಂದು ನಂಬಲಾಗಿದೆ.

 

ತಿರಸ್ಕರಿಸಿದ ಅಥವಾ ದಾನ ಮಾಡಿದ ನಂತರ ಬಟ್ಟೆಗಳನ್ನು ಹಡಗುಗಳಲ್ಲಿ ತುಂಬಿ ಇತರ ದೇಶಗಳಿಗೆ ಕಳುಹಿಸಲಾಗುತ್ತದೆ. ಆ ಉಡುಪುಗಳು ಸಾಮಾನ್ಯವಾಗಿ ಯಾರಾದರೂ ಧರಿಸಲು ಯೋಗ್ಯವಾದ ಗುಣಮಟ್ಟದಲ್ಲಿ ಇರುವುದು ಕಡಿಮೆ. ಆದ್ದರಿಂದ, ಅವುಗಳನ್ನು ಲ್ಯಾಂಡ್​ ಫಿಲ್​ ಸ್ಥಳಗಳು, ಕಡಲತೀರಗಳು ಮತ್ತು ನದಿಗಳಲ್ಲಿ ಎಸೆಯಲಾಗುತ್ತದೆ. ಇದು ಪರಿಸರವನ್ನು ಉಸಿರುಗಟ್ಟಿಸುತ್ತಿದೆ.

ಪದೇ ಪದೇ ಸಾವಿಗೆ ನಲುಗಿದ ಫ್ಯಾಮಿಲಿ: 8 ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಸಾವು

ಘಾನಾದ ಅಕ್ರಾದಲ್ಲಿರುವ ಜೇಮ್​ಸ್ಟೌನ್​ ಸಮುದ್ರತೀರದಲ್ಲಿ ಇಂಥದ್ದೊಂದು ಸನ್ನಿವೇಶ ಕಂಡು ಬರುತ್ತಿದೆ. ಬಳಸಿದ ಬಟ್ಟೆಗಳ ರಾಶಿ ಸಮುದ್ರ ತಟವನ್ನೇ ಮುಚ್ಚಿದಂತಿರುವುದು ಫೋಟೋದಲ್ಲಿ ಕಾಣಿಸಿದೆ.

ಯುಕೆ ಮಾತ್ರವಲ್ಲದೆ ಯುರೋಪ್​, ಆಸ್ಟ್ರೇಲಿಯಾ, ಉತ್ತರ ಅಮೇರಿಕಾ ಮತ್ತು ಆಸ್ಟ್ರೇಲಿಯಾದಿಂದ ಪ್ರತಿ ವರ್ಷವೂ 15 ಮಿಲಿಯನ್ ಟನ್​ ಬಳಸಿದ ಉಡುಪುಗಳನ್ನು ಅಕ್ರಾಗೆ ಕಳುಹಿಸಲಾಗುತ್ತದೆ. ಅನಗತ್ಯ ವಸ್ತುಗಳ ಈ ಬೃಹತ್​ ರಾಶಿಯಲ್ಲಿ ಯಾರೂ ಧರಿಸುವ ಸ್ಥಿತಿಯಲ್ಲಿ ಇಲ್ಲದವೇ ಹೆಚ್ಚಿರುತ್ತದೆ.

ಚಿಲಿಯ ಅಟಕಾಮಾ ಮರುಭೂಮಿಗೆ ಪ್ರತಿ ವರ್ಷ ಅಭಿವೃದ್ಧಿ ಹೊಂದಿದ ದೇಶಗಳಿಂದ ಸುಮಾರು 39,000 ಟನ್​ಗಳಷ್ಟು ತ್ಯಾಜ್ಯ ರವಾನೆಯಾಗುತ್ತಿದೆ. ಮುಂದುವರಿದ ದೇಶದ ಸಮಸ್ಯೆ ವರ್ಗಾವಣೆಯಾಗುತ್ತಿದ್ದು, ಇದಕ್ಕೊಂದು ಸ್ಪಷ್ಟ ಪರಿಹಾರ ಕಾಣಿಸಿಲ್ಲವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...