alex Certify ಇಂಡೋ-ಪಾಕ್ ಗಡಿಯಲ್ಲಿ ಜನಿಸಿದ ಮಗುವಿನ ಹೆಸರು ‘ಬಾರ್ಡರ್’…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡೋ-ಪಾಕ್ ಗಡಿಯಲ್ಲಿ ಜನಿಸಿದ ಮಗುವಿನ ಹೆಸರು ‘ಬಾರ್ಡರ್’…!

Pakistani woman gives birth to baby in Attari border shelter, named 'Border'  - MA MEDIA 24ಇಂಡೋ-ಪಾಕ್ ನ ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ‘ಬಾರ್ಡರ್’ ಎಂದು ನಾಮಕರಣ ಮಾಡಲಾಗಿದೆ. ಡಿಸೆಂಬರ್ 2, 2021 ರಂದು, ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.

ಪಾಕಿಸ್ತಾನದ ದಂಪತಿಗಳು ಕಳೆದ 71 ದಿನಗಳಿಂದ ಇತರೆ 97 ಪಾಕಿಸ್ತಾನಿ ಪ್ರಜೆಗಳೊಂದಿಗೆ ಅಟ್ಟಾರಿ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಪಂಜಾಬ್ ಪ್ರಾಂತ್ಯದ ರಾಜನ್‌ಪುರ ಜಿಲ್ಲೆಗೆ ಸೇರಿದ ಪೋಷಕರು, ನಿಂಬು ಬಾಯಿ ಮತ್ತು ಬಲಮ್ ರಾಮ್ ಅವರ ಮಗು ಭಾರತ-ಪಾಕ್ ಗಡಿಯಲ್ಲಿ ಜನಿಸಿದ ಕಾರಣ  ಈ ಹೆಸರನ್ನು ಇಡಲಾಗಿದೆ.

ʼಪ್ರೋಟೀನ್ʼ ಕೊರತೆ ಇದ್ದರೆ ಸೇವಿಸಿ ಬೇಯಿಸಿದ ಮೊಳಕೆ ಕಾಳುಗಳು

ತುಂಬು ಗರ್ಭಿಣಿಯಾಗಿದ್ದ ನಿಂಬು ಬಾಯಿಗೆ ಡಿಸೆಂಬರ್ 2 ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ವಿಷಯ ತಿಳಿದ ನೆರೆಯ ಗ್ರಾಮದ ಮಹಿಳೆಯರು ನಿಂಬು ಬಾಯಿಯ ಸಹಾಯಕ್ಕಾಗಿ ಧಾವಿಸಿದ್ದಾರೆ. ಸ್ಥಳೀಯರು ಹೆರಿಗೆಗೆ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಇತರ ಸಹಾಯವನ್ನೂ ಕೂಡ ಮಾಡಿದ್ದಾರೆ.

ಲಾಕ್‌ಡೌನ್‌ಗೂ ಮುನ್ನ ತಮ್ಮ ಸಂಬಂಧಿಕರನ್ನು ಭೇಟಿ ಮಾಡುವುದರ ಜೊತೆಗೆ ತೀರ್ಥಯಾತ್ರೆಗೆಂದು ಭಾರತಕ್ಕೆ ಬಂದ 98 ಇತರ ನಾಗರಿಕರೊಂದಿಗೆ ಅವರು, ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಮನೆಗೆ ಮರಳಲು ಸಾಧ್ಯವಾಗಲಿಲ್ಲ ಎಂದು ಬಲಮ್ ರಾಮ್ ಮಾಹಿತಿ ತಿಳಿಸಿದ್ದಾರೆ.

ಬಲಮ್ ರಾಮ್ ಹೊರತಾಗಿ, ಅದೇ ಟೆಂಟ್‌ನಲ್ಲಿ ವಾಸಿಸುತ್ತಿದ್ದ ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಲಗ್ಯಾ ರಾಮ್ ಅವರು, 2020 ರಲ್ಲಿ ಜೋಧ್‌ಪುರದಲ್ಲಿ ಜನಿಸಿದ ಅವರ ಮಗನಿಗೆ ‘ಭರತ್’ ಎಂದು ಹೆಸರಿಟ್ಟಿದ್ದಾರೆ. ಲಗ್ಯಾ ಜೋಧ್‌ಪುರದಲ್ಲಿರುವ ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದರು.  ಆದರೆ, ಮರಳಿ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗಲಿಲ್ಲ.

BREAKING NEWS: ದುಬೈಗೆ ಹೊರಟಿದ್ದ ನಟಿ ಜಾಕ್ವೆಲಿನ್ ಫೆರ್ನಾಂಡೀಸ್ ಗೆ ಬಿಗ್ ಶಾಕ್; ಮುಂಬೈ ಏರ್ ಪೋರ್ಟ್ ನಲ್ಲೇ ತಡೆ

ಸಿಕ್ಕಿಬಿದ್ದಿರುವ ಇತರ ಪಾಕಿಸ್ತಾನಿಗಳಲ್ಲಿ ಮೋಹನ್ ಮತ್ತು ಸುಂದರ್ ದಾಸ್ ಕೂಡ ಸೇರಿದ್ದಾರೆ. ಇವರೆಲ್ಲರೂ ರಹೀಮ್ ಯಾರ್ ಖಾನ್ ಮತ್ತು ರಾಜನ್‌ಪುರ ಸೇರಿದಂತೆ ಪಾಕಿಸ್ತಾನದ ವಿವಿಧ ಜಿಲ್ಲೆಗಳಿಗೆ ಸೇರಿದವರು. ಪಾಕಿಸ್ತಾನಿ ರೇಂಜರ್‌ಗಳು ಅವರನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಅವರು, ಪ್ರಸ್ತುತ ಅಟ್ಟಾರಿ ಗಡಿಯಲ್ಲಿ ಟೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.

ಈ ಕುಟುಂಬಗಳು ಅಟ್ಟಾರಿ ಅಂತರಾಷ್ಟ್ರೀಯ ಚೆಕ್ ಪೋಸ್ಟ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಬೀಡುಬಿಟ್ಟಿವೆ. ಸ್ಥಳೀಯರು ಇವರಿಗೆ ಮೂರು ಹೊತ್ತಿನ ಊಟ, ಔಷಧ, ಬಟ್ಟೆ ನೀಡಿ ಉಪಚರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...