alex Certify ಪಾಕಿಸ್ತಾನದಿಂದ ಗಂಟು-ಮೂಟೆ ಕಟ್ಟಿದ ಊಬರ್‌ ಕಂಪನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಿಂದ ಗಂಟು-ಮೂಟೆ ಕಟ್ಟಿದ ಊಬರ್‌ ಕಂಪನಿ…!

ಪಾಕಿಸ್ತಾನದಲ್ಲಿ ಊಬರ್‌ ಕಂಪನಿ ಟ್ಯಾಕ್ಸಿ ಸೇವೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಪಾಕಿಸ್ತಾನದ ದೊಡ್ಡ ದೊಡ್ಡ ನಗರಗಳಲ್ಲಿ ಕಳೆದ ವರ್ಷವೇ ಊಬರ್ ಸೇವೆ ಸ್ಥಗಿತಗೊಂಡಿತ್ತು. ಆದರೆ ಊಬರ್‌ನ ಅಂಗಸಂಸ್ಥೆಯಾದ ಕರೀಮ್, ಪಾಕಿಸ್ತಾನದಲ್ಲಿ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲಿದೆ.

2019 ರಲ್ಲಿ ಊಬರ್, ಕರೀಮ್ ಅನ್ನು 3.1 ಬಿಲಿಯನ್ ಡಾಲರ್‌ಗೆ ಖರೀದಿಸಿತ್ತು. ಆ ಸಮಯದಲ್ಲಿ ಎರಡೂ ಕಂಪನಿಗಳು ತಮ್ಮ ಪ್ರತ್ಯೇಕ ಸೇವೆಗಳು ಮತ್ತು ಗುರುತನ್ನು ಕಾಪಾಡಿಕೊಳ್ಳುವುದಾಗಿ ಹೇಳಿದ್ದವು. ಆದರೆ ಇದೀಗ ಊಬರ್ ಪಾಕಿಸ್ತಾನದಲ್ಲಿ ತನ್ನ ವ್ಯವಹಾರವನ್ನು ಮುಚ್ಚಿದೆ.

ಊಬರ್ 2022 ರಲ್ಲಿ ಕರಾಚಿ, ಮುಲ್ತಾನ್, ಫೈಸಲಾಬಾದ್, ಪೇಶಾವರ್ ಮತ್ತು ಇಸ್ಲಾಮಾಬಾದ್‌ನಂತಹ ನಗರಗಳಲ್ಲಿ ತನ್ನ ಸೇವೆಗಳನ್ನು ನಿಲ್ಲಿಸಿತ್ತು. ಈ ನಗರಗಳಲ್ಲಿನ ಜನರು ಕರೀಮ್ ಮೂಲಕ ಮತ್ತು ಲಾಹೋರ್‌ನಲ್ಲಿ ಊಬರ್ ಅಪ್ಲಿಕೇಶನ್ ಮೂಲಕ ಟ್ಯಾಕ್ಸಿಗಳನ್ನು ಪಡೆಯುತ್ತಿದ್ದರು.

ಸದ್ಯ ದೇಶಾದ್ಯಂತ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ಪಾಕಿಸ್ತಾನದಲ್ಲಿ Uber ಅನ್ನು ಬಳಸುತ್ತಿದ್ದ ಜನರು ಈಗ Careem ಅಪ್ಲಿಕೇಶನ್‌ಗೆ ಬದಲಾಯಿಸಬೇಕಾಗುತ್ತದೆ. ಊಬರ್ ಖಾತೆಯಲ್ಲಿ ಗ್ರಾಹಕರ ಹಣ ಉಳಿದಿದ್ದರೆ ಅದನ್ನು ಕಂಪನಿ ಹಿಂದಿರುಗಿಸಲಿದೆ. ಇದಲ್ಲದೆ ಅವರಿಗೆ ಕರೀಮ್‌ನಲ್ಲಿ ಕೆಲವು ಉಚಿತ ಸವಾರಿಗಳನ್ನು ಸಹ ಒದಗಿಸಲಾಗುತ್ತದೆ.

ಪಾಕಿಸ್ತಾನದಲ್ಲಿ ಹೊಸ ಕಾರು ಬುಕಿಂಗ್ ಅಪ್ಲಿಕೇಶನ್‌ಗಳ ಆಗಮನದೊಂದಿಗೆ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಈ ಹೊಸ ಕಂಪನಿಗಳು ಕಡಿಮೆ ಬೆಲೆಯಲ್ಲಿ ರೈಡ್ ಒದಗಿಸುತ್ತಿರುವುದರಿಂದ Careem ಮತ್ತು Uber ನಂತಹ ದೊಡ್ಡ ಕಂಪನಿಗಳಿಗೆ ಸಂಕಷ್ಟ ಎದುರಾಗಿದೆ. ಪಾಕಿಸ್ತಾನದಲ್ಲಿ ಹೊಸ ಸೌಲಭ್ಯ ‘ಇನ್-ರೈಡ್’ ಸಾಕಷ್ಟು ಜನಪ್ರಿಯವಾಗಿದೆ. ಇದರಲ್ಲಿ ಜನರು ನೇರವಾಗಿ ಚಾಲಕನೊಂದಿಗೆ ಶುಲ್ಕದ ಬಗ್ಗೆ ಚರ್ಚಿಸಬಹುದು.

Uber ಕಂಪನಿ 2016ರ ಮಾರ್ಚ್‌ನಲ್ಲಿ ತನ್ನ ಸೇವೆಯನ್ನು ಪಾಕಿಸ್ತಾನದಲ್ಲಿ ಆರಂಭಿಸಿತ್ತು. ಊಬರ್‌ ಹೊರತುಪಡಿಸಿ ಕರೀಮ್, ಬೈಕಿಯಾ, ಸಿಯಾರಾ, ಏರ್‌ಲಿಫ್ಟ್, ಬೋಲ್ಟ್, ಇನ್‌ಡ್ರೈವ್ ಸೇರಿದಂತೆ ಪಾಕಿಸ್ತಾನದಲ್ಲಿ ಇನ್ನೂ ಹಲವು ಟ್ಯಾಕ್ಸಿ ಬುಕಿಂಗ್ ಅಪ್ಲಿಕೇಶನ್‌ಗಳು ಲಭ್ಯವಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...