alex Certify ತನ್ನ ಇಚ್ಛೆ ವಿರುದ್ಧ ಮದುವೆಯಾಗಿದ್ದ ಪುತ್ರಿಯ ಬಾಳಿಗೆ ಕೊಳ್ಳಿ ಇಟ್ಟ ಪಾಪಿ ತಂದೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಇಚ್ಛೆ ವಿರುದ್ಧ ಮದುವೆಯಾಗಿದ್ದ ಪುತ್ರಿಯ ಬಾಳಿಗೆ ಕೊಳ್ಳಿ ಇಟ್ಟ ಪಾಪಿ ತಂದೆ..!

ಒಬ್ಬ ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ ಸ್ವತಃ ತಂದೆಯೇ ತನ್ನ ಹೆಣ್ಣುಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಪಾಕಿಸ್ತಾನದ ಮುಜಾಫರ್​​ಗರ್​ ಜಿಲ್ಲೆಯ ಪೀರ್​ ಜಹನೈನ್​​ ಪಟ್ಟಣದಲ್ಲಿ ವರದಿಯಾಗಿದೆ. ಈ ಘಟನೆಯಲ್ಲಿ 7 ಮಂದಿ ಸಜೀವ ದಹನವಾಗಿದ್ದಾರೆ. ಈ ಸಂಬಂಧ ಆರೋಪಿ ಮಂಜೂರ್​ ಹುಸೇನ್​ ವಿರುದ್ಧ ಪೊಲೀಸರು ಲುಕ್​ಔಟ್​ ನೋಟಿಸ್​ ಜಾರಿ ಮಾಡಿದ್ದಾರೆ.

ಕ್ಯಾನ್ಸರ್‌ ಮುಕ್ತ ಮಗನೊಂದಿಗೆ ಕುಣಿದು ಸಂಭ್ರಮಿಸಿದ ತಂದೆ; ಲಕ್ಷಾಂತರ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ ಈ ವಿಡಿಯೋ

ಮಂಜೂರ್ ಹುಸೇನ್​ ಬೆಂಕಿ ಹಚ್ಚಿದ ಈ ಮನೆಯಲ್ಲಿ ಆತನ ಇಬ್ಬರು ಮಕ್ಕಳಾದ ಫೌಜಿಯಾ ಬೀಬಿ ಹಾಗೂ ಖುರ್ಷಿದ್​​ ಮೇ ಕುಟುಂಬ ವಾಸವಿತ್ತು. ಈ ದುರ್ಘಟನೆಯಲ್ಲಿ ಫೌಜಿಯಾ ಬೀಬಿ, ಖುರ್ಷಿದ್​, ಬೀಬಿಯ ನಾಲ್ಕು ತಿಂಗಳ ಪುತ್ರ, ಖುರ್ಷಿದ್​​ ಮೂರು ಮಕ್ಕಳು ಹಾಗೂ ಅವರ ಪತಿ ಸಾವನ್ನಪ್ಪಿದ್ದಾರೆ.

ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ನಡೆಯುವ ವೇಳೆ ಫೌಜಿಯಾ ಪತಿ ಮೆಹಬೂಬ್​ ಅಹಮದ್​ ಮನೆಯಿಂದ ಹೊರಗಡೆ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ʼಕೋವಿಡ್ʼ ಸೋಂಕಿಗೊಳಗಾದರೂ ಲಸಿಕೆ ಹಾಕಿಸಿಕೊಳ್ಳೋದಿಲ್ಲವೆಂದ ನಟಿ…!

ಅಹಮದ್​ ಹಾಗೂ ಫೌಜಿಯಾ 18 ತಿಂಗಳ ಹಿಂದೆ ವಿವಾಹವಾಗಿದ್ದರು. ಈ ಮದುವೆಗೆ ಮಂಜೂರ್ ಹುಸೇನ್​ ವಿರೋಧವಿತ್ತು. ಇದೇ ಕಾರಣಕ್ಕೆ ದ್ವೇಷ ಬೆಳೆಸಿಕೊಂಡಿದ್ದ ಹುಸೇನ್​​ ಈ ಕೃತ್ಯ ಎಸಗಿದ್ದಾನೆ. ಪ್ರಕರಣ ಸಂಬಂಧ ಮೆಹಬೂಬ್​ ಅಹಮದ್ ಮಂಜೂರ್​​ ಹುಸೇನ್​ ಹಾಗೂ ಬಾವ ಸಬೀರ್​ ಹುಸೇನ್​ ವಿರುದ್ಧ​ ದೂರು ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...