alex Certify ʼಕೋವಿಡ್ʼ ಸೋಂಕಿಗೊಳಗಾದರೂ ಲಸಿಕೆ ಹಾಕಿಸಿಕೊಳ್ಳೋದಿಲ್ಲವೆಂದ ನಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೋವಿಡ್ʼ ಸೋಂಕಿಗೊಳಗಾದರೂ ಲಸಿಕೆ ಹಾಕಿಸಿಕೊಳ್ಳೋದಿಲ್ಲವೆಂದ ನಟಿ…!

ಕೋವಿಡ್ ಪಾಸಿಟಿವ್‌ ಆಗಿರುವ ಬಾಲಿವುಡ್ ನಟಿ ಪೂಜಾ ಬೇಡಿ ಶೀಘ್ರ ಗುಣಮುಖರಾಗಲಿ ಎಂದು ಆಕೆಯ ಅಭಿಮಾನಿಗಳು ಆನ್ಲೈನ್‌ನಲ್ಲಿ ಹಾರೈಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡ ವಿಡಿಯೋವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಪೂಜಾ, ಆರಂಭದಲ್ಲಿ ಅಲರ್ಜಿಯಂತೆ ಕಂಡು ಬಂದು ಕೆಮ್ಮಿಗೆ ಕಾರಣವಾದ ರೋಗ ಲಕ್ಷಣವು ಕ್ರಮೇಣ ಜ್ವರಕ್ಕೆ ತಿರುಗಿ ಪರೀಕ್ಷಿಸಿಕೊಂಡಾಗ ಕೊರೊನಾ ವೈರಸ್ ಸೋಂಕು ತಗುಲಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ಅಪಸ್ವರ ಕೇಳಿಬಂದ ಬೆನ್ನಲ್ಲೇ ದೀಪಾವಳಿ ಜಾಹೀರಾತು ತೆಗೆದುಹಾಕಿದ ಫ್ಯಾಬ್ ಇಂಡಿಯಾ

ಇದೇ ವೇಳೆ ತಮ್ಮ ಪತಿ ಹಾಗು ಮನೆಗೆಲಸದಾಕೆಗೂ ಸಹ ಕೋವಿಡ್ ಸೋಂಕು ತಗುಲಿದೆ ಎಂದ ಪೂಜಾ, ಚೇತರಿಸಿಕೊಳ್ಳಲು ಅಗತ್ಯವಿರುವ ಸಕಲ ಮುನ್ನೆಚ್ಚರಿಕೆಗಳನ್ನು ತಾನು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಸೋಂಕಿನಿಂದ ಚೇತರಿಸಿಕೊಳ್ಳಲು ತಮ್ಮ ರೋಗನಿರೋಧಕ ಶಕ್ತಿಯ ಮೇಲೆ ಅವಲಂಬಿತರಾಗುವುದಾಗಿ ತಿಳಿಸಿದ ಪೂಜಾ, ಕೋವಿಡ್ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...