alex Certify ಕಷ್ಟ ಕಾಲಕ್ಕೆ ನೆರವಾದರೂ ನರಿ ಬುದ್ಧಿ ತೋರಿದ ಟರ್ಕಿ: ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಷ್ಟ ಕಾಲಕ್ಕೆ ನೆರವಾದರೂ ನರಿ ಬುದ್ಧಿ ತೋರಿದ ಟರ್ಕಿ: ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪ

ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಕಂಗೆಟ್ಟು ಹೋಗಿರೋ ಟರ್ಕಿಗೆ ಭಾರತ ಅಪಾರ ಸಹಾಯ ಹಸ್ತ ಚಾಚಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆಪರೇಷನ್​ ದೋಸ್ತಿ ಹೆಸರಿನಲ್ಲಿ ಭಾರತದ ಸೇನೆ ಟರ್ಕಿಗೆ ತೆರಳಿ ಅಲ್ಲಿರುವ ಜನರ ಜೀವವನ್ನು ಕಾಪಾಡಿದೆ. ಮಾತ್ರವಲ್ಲದೇ ಎನ್‌ಡಿಆರ್‌ಎಫ್ ಯೋಧರನ್ನು ಕಳುಹಿಸಿದೆ. ಅಗತ್ಯ ಉಪಕರಣಗಳು ಮತ್ತು ಅಗತ್ಯ ವಸ್ತುಗಳ ಜೊತೆಗೆ ತರಬೇತಿ ಪಡೆದ ಶ್ವಾನ ತಂಡವನ್ನು ಕಳುಹಿಸಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಇಷ್ಟೆಲ್ಲಾ ಮಾಡಿದ ಮೇಲೂ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ನಲ್ಲಿ, ಟರ್ಕಿಯು ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿ ಭಾರತದ ವಿರೋಧ ನಿಂತಿದೆ.

ಭಾರತದಿಂದ ಭಾರಿ ನೆರವು ಪಡೆದ ವಾರದ ನಂತರದಲ್ಲಿಯೇ ಟರ್ಕಿ ಭಾರತದ ವಿರುದ್ಧ ಹೇಳಿಕೆ ನೀಡಿದೆ. ಜಿನೀವಾದಲ್ಲಿ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್​ನಲ್ಲಿ ಟರ್ಕಿಯು, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಪ್ರಸ್ತಾಪಿಸಿದೆ. ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಖಂಡಿಸಿದ್ದಾರೆ. ಒಐಸಿ ಈಗಾಗಲೇ ಈ ವಿಷಯದ ಕುರಿತು ಚರ್ಚಿಸಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಈ ಮೂಲಕ ಕೋಮುವಾದ, ಪಕ್ಷಪಾತದಂಥ ಕಾರ್ಯ ಎಸಗುತ್ತಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...