alex Certify ಎಲೆಕ್ಟ್ರಿಕ್​ ಸ್ಕೂಟರ್​ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್​ ಸ್ಕೂಟರ್​ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಖುಷಿ ಸುದ್ದಿ

ಓಲಾ ಕಂಪನಿಯು ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್​ ಸ್ಕೂಟರ್​ನ್ನು ಇದೇ ಬರುವ ಸ್ವಾತಂತ್ರ್ಯ ದಿನಾಚರಣೆ ದಿನದಂದು ಲೋಕಾರ್ಪಣೆ ಮಾಡಲಿದೆ. ಓಲಾ ಕ್ಯಾಬ್ಸ್​ ಸಹ ಸಂಸ್ಥಾಪಕ ಹಾಗೂ ಸಿಇಓ ಭವೀಶ್​ ಅಗರ್​ವಾಲ್​​​ ಎಲೆಕ್ಟ್ರಿಕ್​ ಸ್ಕೂಟರ್​​ನ ಲೋಕಾರ್ಪಣೆಯ ಬಗ್ಗೆ ಮಾಹಿತಿ ನೀಡಿದ್ರು.

ಭವೀಶ್​​ ಓಲಾ ಸ್ಕೂಟರ್​ ಫೋಟೋವನ್ನು ಶೇರ್​ ಮಾಡಿದ್ದಾರೆ. ಈ ಫೋಟೋದಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​​ನ ಸಂಭಾವ್ಯ ಡಿಸೈನ್​ನ ಬಗ್ಗೆ ಸುಳಿವು ಸಿಗುತ್ತಿದೆ. ಬಹುಶಃ ಈ ಸ್ಕೂಟರ್​​ ಗುಲಾಬಿ ಬಣ್ಣದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಓಲಾ ಕಂಪನಿಯು 499 ರೂಪಾಯಿಗೆ ಗ್ರಾಹಕರಿಗೆ ಬೈಕ್​ ಕಾಯ್ದಿರಿಸುತ್ತಿದೆ.

ಟ್ವಿಟರ್​ನಲ್ಲಿ ಅಗರ್​ವಾಲ್​​ ಮೊದಲ ಎಲೆಕ್ಟ್ರಿಕ್​ ಸ್ಕೂಟರ್​​​ ಆಗಸ್ಟ್​ 15ರಂದು ಲೋಕಾರ್ಪಣೆಯಾಗಲಿದೆ ಎಂದು ಹೇಳಿದ್ದಾರೆ. ಆಗಸ್ಟ್​ 15ರಂದು ಓಲಾ ಎಲೆಕ್ಟ್ರಿಕ್​ ಸ್ಕೂಟರ್​ ಲೋಕಾರ್ಪಣೆ ಕಾರ್ಯಕ್ರಮವನ್ನು ನಡೆಸಲು ಯೋಜಿಸಿದ್ದೇವೆ. ಶೀಘ್ರದಲ್ಲೇ ಬೈಕ್​ನ ಸಂಪೂರ್ಣ ಮಾಹಿತಿ ಹಾಗೂ ಉತ್ಪನ್ನದ ಲಭ್ಯತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಟ್ವೀಟಾಯಿಸಿದ್ದಾರೆ.

ಉತ್ಪನ್ನಗಳ ವಿತರಣೆ ಆರಂಭವಾಗುತ್ತಿದ್ದಂತೆಯೇ ಮುಂಗಡ ಬುಕ್ಕಿಂಗ್​ ಕಾಯ್ದಿರಿಸಿದವರಿಗೆ ಮೊದಲ ಆದ್ಯತೆ ನೀಡುತ್ತದೆ. ಈ ಮಧ್ಯದಲ್ಲಿ ಬಳಕೆದಾರರು ಮರುಪಾವತಿ ಬಯಸಿದಲ್ಲಿ ಯಾವುದೇ ಸಮಯದಲ್ಲಿ ಹಣವನ್ನು ವಾಪಸ್​ ಪಡೆಯಬಹುದು ಎಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...