alex Certify BIG NEWS:‌ ಓಲಾ ಕಂಪನಿಯಿಂದ ಮತ್ತೆ ಬೈಕ್​ ಟ್ಯಾಕ್ಸಿ ಸೇವೆ ಆರಂಭ; ಈ ಬಾರಿ EV ವಾಹನಗಳ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಓಲಾ ಕಂಪನಿಯಿಂದ ಮತ್ತೆ ಬೈಕ್​ ಟ್ಯಾಕ್ಸಿ ಸೇವೆ ಆರಂಭ; ಈ ಬಾರಿ EV ವಾಹನಗಳ ಬಳಕೆ

ಬಾಡಿಗೆ ಕ್ಯಾಬ್​ಗಳನ್ನು ಒದಗಿಸುವ ಓಲಾ ಕಂಪನಿಯು ಬೆಂಗಳೂರಿನಲ್ಲಿ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿಗಳನ್ನು ಇಂದಿನಿಂದ ಆರಂಭಿಸಿದೆ. ಓಲಾ ಈ ಹಿಂದೆಯೂ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಒದಗಿಸಿತ್ತು.

ಆದರೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿ ಸೇವೆಯನ್ನ ಓಲಾ ನೀಡಲಿದೆ. ಓಲಾದ ಎಸ್​ 1 ಎಲೆಕ್ಟ್ರಿಕ್​ ಸ್ಕೂಟರ್​ಗಳು ಬೆಂಗಳೂರಿನಲ್ಲಿ ಟ್ಯಾಕ್ಸಿ ರೂಪದಲ್ಲಿ ನಿಮಗೆ ಲಭ್ಯವಿರಲಿದೆ.

ಓಲಾದ ಸಹ ಸಂಸ್ಥಾಪಕ ಭವಿಷ್​ ಅಗರ್ವಾಲ್​ ಸೋಶಿಯಲ್​ ಮೀಡಿಯಾ ವೇದಿಕೆ ಎಕ್ಸ್​ನಲ್ಲಿ ಈ ಬಗ್ಗೆ ಮಾಹಿತಿ ಶೇರ್​ ಮಾಡಿದ್ದಾರೆ. ಇಂದಿನಿಂದ ಬೆಂಗಳೂರಿನಲ್ಲಿ ಓಲಾ ಬೈಕ್​ಟ್ಯಾಕ್ಸಿ ಸೇವೆ ಪುನಾರಂಭಗೊಳ್ಳುತ್ತಿದೆ. ಆದರೆ ಈ ಬಾರಿ ನಮ್ಮ ಸ್ವಂತ ಎಲೆಕ್ಟ್ರಿಕ್​ ಬೈಕ್​ಗಳಾದ ಎಸ್ 1 ಈ ಸೇವೆಯನ್ನ ನೀಡಲಿದೆ ಎಂದು ಹೇಳಿದ್ದಾರೆ.

ಐದು ಕಿಲೋಮೀಟರ್​ ದೂರಕ್ಕೆ 25 ರೂಪಾಯಿ ಹಾಗೂ 10 ಕಿಲೋಮೀಟರ್​ ದೂರಕ್ಕೆ 50 ರೂಪಾಯಿ ದರ ನಿಗದಿ ಮಾಡಲಾಗಿದೆ. ಅತ್ಯಂತ ಕಡಿಮೆ ಹಣದಲ್ಲಿ, ಅತ್ಯಂತ ಆರಾಮದಾಯಕವಾಗಿ, ಪರಿಸರಕ್ಕೂ ಯಾವುದೇ ರೀತಿಯ ಹಾನಿಯುಂಟು ಮಾಡದೇ ಪ್ರಯಾಣಿಸಬಹುದು ಅಂತಾ ಭವಿಷ್​ ಅಗರ್​ವಾಲ್ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಬಾಡಿಗೆ ಕ್ಯಾಬ್​ ಹಾಗೂ ಆಟೋ ಮಾಲೀಕರು ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್​ ಮಾಡ್ಬೇಕು ಅಂತಾ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಬೈಕ್​ ಟ್ಯಾಕ್ಸಿಗಳು ಮಹಿಳೆಯರಿಗೆ ಅಸುರಕ್ಷಿತ ಹಾಗೂ ವೈಟ್​ ಬೋರ್ಡ್​ ಬೈಕ್​ಗಳನ್ನು ಟ್ಯಾಕ್ಸಿ ರೂಪದಲ್ಲಿ ಬಳಕೆ ಮಾಡಬಹುದು ಕಾನೂನು ಬಾಹಿರ ಎಂಬುದು ಇವರ ಆರೋಪವಾಗಿದೆ. ಅಲ್ಲದೇ ಬೆಂಗಳೂರಿನ ಅನೇಕ ಕಡೆಗಳಲ್ಲಿ ರ್ಯಾಪಿಡೋ ಬೈಕ್​ಗಳಿಗೆ ಕೆಲ ಆಟೋ ಚಾಲಕರು ಹಾನಿಯುಂಟು ಮಾಡಿರುವ ಘಟನೆಗಳೂ ವರದಿಯಾಗಿದ್ದವು.

— Bhavish Aggarwal (@bhash) September 16, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...