alex Certify ಓಲಾ ಎಲೆಕ್ಟ್ರಿಕ್​ ಸ್ಕೂಟರ್​ ಖರೀದಿಸಬೇಕೆಂದಿದ್ದೀರಾ…? ಹಾಗಾದ್ರೆ ಇಲ್ಲಿದೆ ಸಾಲ ಕೊಡುವ ಬ್ಯಾಂಕ್‌ ಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಎಲೆಕ್ಟ್ರಿಕ್​ ಸ್ಕೂಟರ್​ ಖರೀದಿಸಬೇಕೆಂದಿದ್ದೀರಾ…? ಹಾಗಾದ್ರೆ ಇಲ್ಲಿದೆ ಸಾಲ ಕೊಡುವ ಬ್ಯಾಂಕ್‌ ಗಳ ಪಟ್ಟಿ

ಆಗಸ್ಟ್​ 15ರಂದು ಓಲಾ ಕಂಪನಿಯು ತನ್ನ ಮೊದಲ ಸರಣಿಯ ಎಲೆಕ್ಟ್ರಿಕ್​ ಬೈಕ್ ​ಗಳನ್ನು ಮಾರುಕಟ್ಟೆಗೆ ಅನಾವರಣಗೊಳಿಸಿತ್ತು. ಓಲಾ ಎಸ್​​1 ಎಲೆಕ್ಟ್ರಿಕ್​​ ಸ್ಕೂಟರ್​​ ಎರಡು ಟ್ರಿಮ್ಸ್​​ಗಳಲ್ಲಿ ಅಂದರೆ ಎಸ್​ 1 ಹಾಗೂ ಎಸ್​ 1 ಪ್ರೋ ಗಳಲ್ಲಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ 99,999 ರೂ. ಹಾಗೂ 1,29,999 ರೂಪಾಯಿ ಆಗಿದೆ.

ಓಲಾ ಕಂಪನಿಯು ಸೆಪ್ಟೆಂಬರ್​ 8ರಿಂದ ಓಲಾ ಎಸ್​1 ಖರೀದಿಗೆ ಅಧಿಕೃತವಾಗಿ ತೆರವುಗೊಳ್ಳಲಿದೆ. ಹಾಗೂ 1000ಕ್ಕೂ ಅಧಿಕ ನಗರ ಹಾಗೂ ಗ್ರಾಮಗಳಲ್ಲಿ ಅಕ್ಟೋಬರ್​ನಲ್ಲಿ ಸ್ಕೂಟರ್​ ಡೆಲಿವರಿ ಮಾಡಲಿದೆ.

ಸೆಪ್ಟೆಂಬರ್​ 8ರಿಂದ ಕಂಪನಿಯು 499 ರೂಪಾಯಿ ಮುಂಗಡ ಹಣಕ್ಕೆ ಬುಕ್ಕಿಂಗ್​ ಆರಂಭಿಸಲಿದೆ. ಓಲಾ ಎಲೆಕ್ಟ್ರಿಕ್​ ಬೈಕ್​ಗಳಿಗೆ 2999 ರೂಪಾಯಿಗಳಿಂದ ಇಎಂಐ ಆರಂಭಿಸಲು ಇಎಂಐ ಕಂಪನಿ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಹಾಗಾದರೆ ಯಾವ್ಯಾವ ಬ್ಯಾಂಕ್​ಗಳ ಜೊತೆ ಓಲಾ ಒಪ್ಪಂದ ಮಾಡಿಕೊಂಡಿದೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ.

ಹೆಚ್​ಡಿಎಫ್​ಸಿ

ಐಸಿಐಸಿಐ

ಐಡಿಎಫ್​ಸಿ ಫಸ್ಟ್​ ಬ್ಯಾಂಕ್​​

ಬ್ಯಾಂಕ್​ ಆಫ್​ ಬರೋಡಾ

ಕೋಟಕ್​ ಮಹೀಂದ್ರಾ

ಆ್ಯಕ್ಸಿಕ್​ ಬ್ಯಾಂಕ್​

ಟಾಟಾ ಕ್ಯಾಪಿಟಲ್​

ಯೆಸ್​ ಬ್ಯಾಂಕ್​

ಎಯು ಸ್ಮಾಲ್​ ಫೈನಾನ್ಶಿಯಲ್​ ಬ್ಯಾಂಕ್​

ಜನ ಸ್ಮಾಲ್​ ಫೈನಾನ್ಸ್

ಓಲಾ ಎಸ್​1 ಸ್ಕೂಟರ್​ 181 ಕಿಮೀ ಶ್ರೇಣಿಯೊಂದಿಗೆ ಬರಲಿದೆ. ಇದು ಗಂಟೆಗೆ 115 ಕಿಮೀ ಗರಿಷ್ಟ ವೇಗ ಹೊಂದಿದೆ ಹಾಗೂ 40 ನಿಮಿಷಗಳಲ್ಲಿ ಬ್ಯಾಟರಿ ಚಾರ್ಜ್ ಆಗಲಿದೆ. ಈ ಸ್ಕೂಟರ್​ ರಿವರ್ಸ್​ ಮೋಡ್​, ಹಿಲ್​ ಹೋಲ್ಡ್​ ಫಂಕ್ಷನ್​, ಡ್ರೈವಿಂಗ್​ ಮೋಡ್ಸ್​​ ಹಾಗೂ ಕ್ರ್ಯೂಸ್​​ ಕಂಟ್ರೋಲ್​ನಂತಹ ವೈಶಿಷ್ಠ್ಯ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...