ಗೆಜ್ಜೆಗಳು ಅಂದರೆ ಸಾಕು ಹೆಣ್ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಈಗಿನ ಜಮಾನದಲ್ಲಿ ಬೇರೆ ಬೇರೆ ಲೋಹದಿಂದ ಮಾಡಿದ ಗೆಜ್ಜೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಭಾರತೀಯ ಸಂಪ್ರದಾಯದಲ್ಲಿ ಬೆಳ್ಳಿ ಗೆಜ್ಜೆಗಳಿಗೆ ತುಂಬಾನೇ ಪ್ರಾಮುಖ್ಯತೆ ಇದೆ. ಆದರೆ ಈ ಬೆಳ್ಳಿಯ ಗೆಜ್ಜೆಗಳು ಕಾಲಿನ ಸೌಂದರ್ಯವನ್ನ ಹೆಚ್ಚಿಸೋದ್ರ ಜೊತೆ ಜೊತೆಗೆ ಉತ್ತಮ ಆರೋಗ್ಯವನ್ನೂ ಕರುಣಿಸುತ್ತವೆ.

ಕಾಲು ನೋವು, ಮರಗಟ್ಟುವಿಕೆ, ಅಶಕ್ತತೆಯಿಂದ ಬಳಲುತ್ತಿರುವವರಿಗೆ ಗೆಜ್ಜೆ ಸಹಾಯಕ. ಬೆನ್ನು ನೋವಿನ ಸಮಸ್ಯೆಗೂ ಬೆಳ್ಳಿ ಗೆಜ್ಜೆ ಧರಿಸೋದ್ರಿಂದ ಕೊಂಚ ನಿರಾಳ ಎನಿಸಲಿದೆ. ಅಲ್ಲದೇ, ಗೆಜ್ಜೆಗಳು ಸಾಕಷ್ಟು ಸಕಾರಾತ್ಮಕ ಶಕ್ತಿಯನ್ನ ಒದಗಿಸುತ್ತವೆ. ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಮಹಿಳೆಯರೂ ಗೆಜ್ಜೆಯನ್ನ ಧರಿಸಿದ್ರೆ ತುಂಬಾನೇ ಒಳ್ಳೆಯದು. ಬೆಳ್ಳಿಯ ಗೆಜ್ಜೆಗಳು ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯೋಕೆ ಪೂರಕವಾಗಿರೋದ್ರಿಂದ ಈ ಎಲ್ಲಾ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಬಲ್ಲವು.

ಬೆಳ್ಳಿಯ ಗೆಜ್ಜೆಗಳು ಅಲಂಕಾರಿಕ ವಸ್ತು ಮಾತ್ರವಲ್ಲದೇ ದೇಹದಲ್ಲಿನ ಶಕ್ತಿಯನ್ನ ವ್ಯರ್ಥವಾಗೋಕೆ ಬಿಡೋದಿಲ್ಲ. ವಿವಾಹಿತ ಮಹಿಳೆ ಗೆಜ್ಜೆಯನ್ನ ಧರಿಸೋದ್ರಿಂದ ಆಕೆಯ ಪತಿಗೆ ಅದೃಷ್ಟ ಬರುತ್ತೆ ಎಂಬ ನಂಬಿಕೆಯೂ ಅನೇಕರಲ್ಲಿದೆ. ದೇಹದಲ್ಲಿ ಇಮ್ಯೂನಿಟಿಯನ್ನ ಹೆಚ್ಚಿಸುವ ಕೆಲಸವನ್ನ ಗೆಜ್ಜೆಗಳು ಮಾಡಬಲ್ಲವು.  ಮಾತ್ರವಲ್ಲದೇ ಗೆಜ್ಜೆಯ ಸದ್ದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನ ತರಲು ಸಾಧ್ಯವಾಗುತ್ತೆ. ಮಹಿಳೆಯರಲ್ಲಿ ಉಂಟಾಗುವ ಹಾರ್ಮೋನ್​ ಸಮಸ್ಯೆಗೂ ಗೆಜ್ಜೆ ಧರಿಸೋದ್ರಿಂದ ಪರಿಹಾರ ಸಿಗಲಿದೆ.