alex Certify ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ ಮನೆಯ ಕಿಟಿಕಿ, ಬಾಗಿಲಿನ ಪರದೆಗಳ ಬಣ್ಣ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ ಮನೆಯ ಕಿಟಿಕಿ, ಬಾಗಿಲಿನ ಪರದೆಗಳ ಬಣ್ಣ!  

ಮನೆಯನ್ನು ಚೆನ್ನಾಗಿ ಅಲಂಕರಿಸುವ ಆಸಕ್ತಿ ಎಲ್ಲರಲ್ಲೂ ಇರುತ್ತದೆ. ಇದಕ್ಕಾಗಿ ನಾವು ಹಲವು ರೀತಿಯ ವಸ್ತುಗಳನ್ನು ಬಳಸುತ್ತೇವೆ. ಕಿಟಕಿ ಮತ್ತು ಬಾಗಿಲುಗಳಿಗೆ ಹಾಕುವ ಪರದೆಗಳು ಕೂಡ ಇವುಗಳಲ್ಲೊಂದು. ತೀವ್ರವಾದ ಬೆಳಕು, ಗಾಳಿ, ಬಲವಾದ ಬಿಸಿ ಗಾಳಿ ಮತ್ತು ಶೀತದಿಂದ ಪರದೆ ರಕ್ಷಿಸುತ್ತದೆ. ಸುಂದರವಾದ ಕರ್ಟನ್‌ಗಳನ್ನ ಹಾಕುವುದರಿಂದ ಮನೆಯ ಅಂದವೂ ಹೆಚ್ಚುತ್ತದೆ. ಆದರೆ ಪರದೆಗಳನ್ನು ಆಯ್ದುಕೊಳ್ಳುವಾಗ ಅವುಗಳ ಬಣ್ಣಗಳ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು.

ಏಕೆಂದರೆ ತಪ್ಪಾದ ಬಣ್ಣದ ಪರದೆಗಳನ್ನು ಹಾಕುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಯಾವುದೇ ದಿಕ್ಕಿನಲ್ಲಿ ಅಥವಾ ಯಾವುದೇ ಬಣ್ಣದ ಪರದೆಗಳನ್ನು ಯೋಚಿಸದೆ ಹಾಕಬೇಡಿ. ವಾಸ್ತು ಶಾಸ್ತ್ರದಲ್ಲಿ, ವಿವಿಧ ದಿಕ್ಕುಗಳು ಮತ್ತು ವಿವಿಧ ಕೋಣೆಗಳ ಪ್ರಕಾರ ಪರದೆಗಳ ಬಣ್ಣಗಳನ್ನು ಹೇಳಲಾಗಿದೆ. ಮನೆಯ ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕತೆಗಾಗಿ ಯಾವ ಬಣ್ಣದ ಪರದೆಗಳನ್ನು ಬಳಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ಕೆಂಪು ಬಣ್ಣದ ಪರದೆಗಳು: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿನ ಪರದೆಗಳು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತವೆ. ಮನೆಯಲ್ಲಿ ಘರ್ಷಣೆ ಅಥವಾ ವಿವಾದದ ಪರಿಸ್ಥಿತಿ ಇದ್ದರೆ ಕೆಂಪು ಬಣ್ಣದ ಪರದೆಗಳನ್ನು ಹಾಕಬೇಕು. ದಕ್ಷಿಣ ದಿಕ್ಕಿನಲ್ಲಿ ಕೆಂಪು ಬಣ್ಣದ ಪರದೆಗಳನ್ನು ಹಾಕುವುದರಿಂದ ಭಿನ್ನಾಭಿಪ್ರಾಯ ನಿವಾರಣೆಯಾಗುತ್ತದೆ. ಪರಸ್ಪರರಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ. ಆದರೆ ಮಲಗುವ ಕೋಣೆಯಲ್ಲಿ ಕೆಂಪು ಬಣ್ಣದ ಪರದೆಗಳನ್ನು ಬಳಸಬೇಡಿ.

ಗುಲಾಬಿ ಬಣ್ಣದ ಕರ್ಟನ್ : ಮನೆಯಲ್ಲಿ ಗುಲಾಬಿ ಬಣ್ಣದ ಕರ್ಟನ್ ಹಾಕುವುದರಿಂದ ಕುಟುಂಬದಲ್ಲಿ ಪ್ರೀತಿ ಹೆಚ್ಚುತ್ತದೆ. ಎಲ್ಲರೂ ಒಟ್ಟಾಗಿ ಬಾಳುತ್ತಾರೆ. ಮಲಗುವ ಕೋಣೆಯಲ್ಲಿ ಗುಲಾಬಿ ಬಣ್ಣದ ಪರದೆಗಳನ್ನು ಹಾಕುವುದರಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚುತ್ತದೆ.

ಬಿಳಿ ಬಣ್ಣದ ಪರದೆಗಳು: ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಇದ್ದಲ್ಲಿ ಮತ್ತು ಆರ್ಥಿಕ ತೊಂದರೆಗೊಳಗಾಗಿದ್ದರೆ ವಾಸ್ತು ಪ್ರಕಾರ, ಪಶ್ಚಿಮ ದಿಕ್ಕಿನಲ್ಲಿರುವ ಮನೆಯ ಬಾಗಿಲು ಅಥವಾ ಕಿಟಕಿಗಳಿಗೆ ಬಿಳಿ ಬಣ್ಣದ ಪರದೆಗಳನ್ನು ಹಾಕಬೇಕು. ಇದರಿಂದ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಮತ್ತು ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ಮಲಗುವ ಕೋಣೆಯ ವಾಯುವ್ಯ ದಿಕ್ಕಿನ ಕಿಟಕಿಗಳು ಅಥವಾ ಬಾಗಿಲಿಗೆ ಕೆನೆ ಬಣ್ಣದ ಕರ್ಟನ್‌ಗಳನ್ನು ಹಾಕಬಹುದು. ಬಿಳಿ ಬಣ್ಣದ ಪರದೆಗಳು ಸಂತೋಷ ಮತ್ತು ಶಾಂತಿಯನ್ನು ತರುತ್ತವೆ.

ಹಸಿರು ಬಣ್ಣದ ಪರದೆ: ಹಸಿರು ಬಣ್ಣವನ್ನು ಸಮೃದ್ಧಿ ಮತ್ತು ಪ್ರಕೃತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜೀವನವು ಏಕತಾನತೆಯಿಂದ ಕೂಡಿದ್ದರೆ ಅಥವಾ ನೀವು ವೈಯಕ್ತಿಕ ಜೀವನದಲ್ಲಿ ಸಂತೋಷದ ಕ್ಷಣವನ್ನು ಬದುಕಲು ಸಾಧ್ಯವಾಗದೇ ಚಿಂತೆ ಮಾಡುತ್ತಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನ ಬಾಗಿಲು-ಕಿಟಕಿಗಳಿಗೆ ಹಸಿರು ಬಣ್ಣದ ಪರದೆಗಳನ್ನು ಹಾಕಬೇಕು.

ಹಳದಿ ಪರದೆ: ಹಳದಿ ಬಣ್ಣವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಮನೆಯ ಪೂಜಾ ಸ್ಥಳದಲ್ಲಿ ಹಳದಿ ಬಣ್ಣದ ಪರದೆಗಳನ್ನು ಹಾಕುವುದು ಶುಭ. ಇದರಿಂದ ಧಾರ್ಮಿಕ ನಂಬಿಕೆ ಹೆಚ್ಚುತ್ತದೆ. ಮನೆಯಲ್ಲಿ ಹಳದಿ ಬಣ್ಣದ ಪರದೆಗಳನ್ನು ಹಾಕುವುದರಿಂದ ಒತ್ತಡ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...