alex Certify ಕಾಡುವ ಕಾಲು ನೋವಿಗೆ ಇಲ್ಲಿದೆ ಪರಿಣಾಮಕಾರಿ ‘ಮನೆಮದ್ದು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುವ ಕಾಲು ನೋವಿಗೆ ಇಲ್ಲಿದೆ ಪರಿಣಾಮಕಾರಿ ‘ಮನೆಮದ್ದು’

ಕಾಲು ನೋವು ಗಂಭೀರ ಸಮಸ್ಯೆ. ಮೊದಲು ವಯಸ್ಸಾದವರಲ್ಲಿ ಮಾತ್ರ ಈ ತೊಂದರೆ ಕಾಣಿಸಿಕೊಳ್ತಾ ಇತ್ತು. ಆದರೆ ಈಗ ಎಲ್ಲಾ ವಯಸ್ಸಿನವರಲ್ಲೂ ಕಾಲು ನೋವು ಕಾಣಿಸಿಕೊಳ್ತಾ ಇದೆ. ಈ ನೋವು ದೀರ್ಘಕಾಲದವರೆಗೆ ಮುಂದುವರಿದರೆ, ನಂತರ ನಡೆಯೋದು ಕೂಡ ಕಷ್ಟವಾಗಬಹುದು. ಕಾಲು ನೋವು ನಿವಾರಣೆಗೆ ನೀವು ಕೆಲವು ಮನೆಮದ್ದುಗಳನ್ನು ಮಾಡಿ.

ಹಾಟ್ ಪ್ಯಾಕ್‌ : ಕಾಲು ನೋವು ಹೆಚ್ಚಿದ್ದರೆ ಹಾಟ್ ಪ್ಯಾಕ್ ಬಳಸುವಂತೆ ವೈದ್ಯರು ಸಲಹೆ ನೀಡ್ತಾರೆ. ಹಾಟ್ ಕಂಪ್ರೆಸ್ ಎಷ್ಟು ಪ್ರಯೋಜನಕಾರಿಯೋ, ಕೋಲ್ಡ್ ಪ್ಯಾಕ್ ಕೂಡ ಅಷ್ಟೇ ಪ್ರಯೋಜನಕಾರಿ. ಅಂದರೆ ಮನೆಯಲ್ಲಿ ಫ್ರೀಜರ್‌ ನಲ್ಲಿರೋ ಐಸ್‌ ತೆಗೆದುಕೊಂಡು ಅದನ್ನು ಟವೆಲ್‌ ನಲ್ಲಿ ಸುತ್ತಿ ನೋವು ಅಥವಾ ಊತ ಇರುವ ಕಡೆ ಇಡಬೇಕು. ನೋವು ಜಾಸ್ತಿ ಇದ್ದರೆ ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿ.

ಎಣ್ಣೆ ಮಸಾಜ್‌ : ಋತುಮಾನಕ್ಕೆ ಅನುಗುಣವಾಗಿ ಎಣ್ಣೆಯನ್ನು ಆರಿಸಿಕೊಂಡು ನೋವಿದ್ದ ಜಾಗದಲ್ಲಿ ನಿಧಾನವಾಗಿ ಮಸಾಜ್ ಮಾಡಿ. ಊತವಿದ್ದರೆ ಅಲ್ಲಿ ಮಸಾಜ್ ಮಾಡುವುದು ಸೂಕ್ತವಲ್ಲ. ನೋವು ಇರುವ ಕಡೆ ಮತ್ತು ಅದರ ಸುತ್ತಲೂ ಲಘುವಾಗಿ ಮಸಾಜ್ ಮಾಡಬಹುದು. ಚಳಿಗಾಲದಲ್ಲಿ ಬೆಚ್ಚಗಿನ ಸಾಸಿವೆ ಎಣ್ಣೆಯಿಂದ ಮಸಾಜ್‌ ಮಾಡಿದರೆ ರಕ್ತದ ಹರಿವು ಸುಧಾರಿಸುತ್ತದೆ.

ಅರಿಶಿನ ಹಾಲು: ಕಾಲು ನೋವು ವಿಪರೀತವಾಗಿದ್ದರೆ ಅರಿಶಿನ ಹಾಲು ಕುಡಿಯಿರಿ. ಅರಿಶಿನದಲ್ಲಿ ನೋವು ನಿವಾರಕ ಗುಣಗಳಿವೆ. ಅನೇಕ ಉತ್ಕರ್ಷಣ ನಿರೋಧಕ ಗುಣಗಳನ್ನು ಸಹ ಇದು ಹೊಂದಿದೆ. ಹಾಲಿಗೆ ಚಿಟಿಕೆ ಅರಿಶಿನ ಹಾಕಿಕೊಂಡು ಕುದಿಸಿ ಕುಡಿಯುವುದು ಉತ್ತಮ.

ಡಯಟ್ : ಕಾಲು ನೋವು ಮರುಕಳಿಸದಂತೆ ತಡೆಯಲು ನೀವು ಮೆಗ್ನೀಸಿಯಮ್ ಅಂಶ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಬಾಳೆಹಣ್ಣು, ವಾಲ್‌ ನಟ್‌, ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...