alex Certify ಭಾರತದ ಧ್ವಜ ಉಲ್ಟಾ ಹಿಡಿದ ನಟಿ ನೋರಾ: ನೆಟ್ಟಿಗರ ಭಾರಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಧ್ವಜ ಉಲ್ಟಾ ಹಿಡಿದ ನಟಿ ನೋರಾ: ನೆಟ್ಟಿಗರ ಭಾರಿ ಆಕ್ರೋಶ

ಕತಾರ್‌ನಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್​ನಲ್ಲಿ ನಟಿ ನೋರಾ ಫತೇಹಿ ಭಾರತದ ಧ್ವಜವನ್ನು ತಲೆಕೆಳಗಾಗಿ ಹಿಡಿದುಕೊಂಡಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧವಾಗಿ ಅವರು ತೀವ್ರವಾಗಿ ಟ್ರೋಲ್​ಗೆ ಒಳಗಾಗಿದ್ದಾರೆ.

ವೇದಿಕೆ ಮೇಲೆ ಈಕೆ ಹಲವಾರು ಬಾಲಿವುಡ್‌ನ ಸೂಪರ್ ಹಿಟ್ ಹಾಡುಗಳಿಗೆ ನರ್ತಿಸಿದರು. ಈ ಸಮಯದಲ್ಲಿ ಭಾರತದ ಧ್ವಜ ಹಾರಿಸಿದರು, ಜೈ ಹಿಂದ್ ಎಂದು ಕೂಗಿದರು. ಈ ಸಂದರ್ಭದಲ್ಲಿ ಮೈಮರೆತ ಅವರು, ನೃತ್ಯ ಮಾಡುವಾಗ ಭಾರತದ ಧ್ವಜವನ್ನು ತಿರುಗಾ ಮುರುಗಾ ಹಿಡಿದರು.

ಮೊದಲು ಸರಿಯಾಗಿ ಹಿಡಿದುಕೊಂಡಿದ್ದ ನಟಿ, ನಂತರ ನಂತರ ತಲೆಕೆಳಗಾಗಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗುತ್ತಿದೆ. ಈಕೆ ಭಾರತೀಯರ ಕ್ಷಮೆ ಕೋರಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...