alex Certify ಎಲ್ಲವೂ ʼಡಯಟ್ʼ ಪಟ್ಟಿಯಲ್ಲಿದ್ದರೆ ತಿನ್ನೋದೇನು ? ಡಾಕ್ಟರ್ ಕಾಲೆಳೆದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲವೂ ʼಡಯಟ್ʼ ಪಟ್ಟಿಯಲ್ಲಿದ್ದರೆ ತಿನ್ನೋದೇನು ? ಡಾಕ್ಟರ್ ಕಾಲೆಳೆದ ನೆಟ್ಟಿಗರು

ತೂಕ ಇಳಿಸಿಕೊಳ್ಳಲು ವೈದ್ಯರ ಸಲಹೆ ಪಡೆಯುವುದು, ಅವರ ಹೇಳಿದಂತೆ ಡಯಟ್​ ಮಾಡುವುದು, ಆಹಾರ ಕ್ರಮ ಅನುಸರಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಇಲ್ಲೊಬ್ಬ ವೈದ್ಯರು ನೀಡಿದ ಡಯಟ್​ ಲಿಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ವೈದ್ಯರು ಸೂಚಿಸಿದ “ಡಯಟ್​ ಟು ಬಿ ಫಾಲೋಡ್​” ಅಡಿಯಲ್ಲಿ ಉಲ್ಲೇಖಿಸಲಾದ ಆಹಾರಗಳ ಪಟ್ಟಿಯಲ್ಲಿನ ಅಂಶಗಳು ವಿಲಕ್ಷಣವಾಗಿದೆ ಎಂಬ ಟೀಕೆಗಳು ಬಂದಿವೆ. ತೂಕವನ್ನು ಕಳೆದುಕೊಳ್ಳಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ವೈದ್ಯರ ಸಲಹೆಯನ್ನು ಪಡೆದ ಈ ವ್ಯಕ್ತಿಯು ನಿಖರವಾಗಿ ಏನು ಮಾಡಿದ್ದಾನೆ ಎಂಬ ಪ್ರಶ್ನೆ ನೆಟ್ಟಿಗರದ್ದಾಗಿದೆ.

ಭೀಮನ ಅಮವಾಸ್ಯೆಯಂದು ಪತಿಯ ಆಯಸ್ಸು, ಯಶಸ್ಸಿಗೆ ಪತ್ನಿ ತಪ್ಪದೆ ಮಾಡಿ ಈ ಕೆಲಸ

ಗೋಮಾಂಸ, ಹಂದಿಮಾಂಸ, ಆಲ್ಕೋಹಾಲ್​ ಮತ್ತು ಕಡಲೆಕಾಯಿ ಬೆಣ್ಣೆ ಬಳಕೆ ತಪ್ಪಿಸಲು ವೈದ್ಯರ ಸಲಹೆ ಇದೆ. ಮುಂದುವರಿದು ಮೊಸರು, ಸೌತೆಕಾಯಿ ಬಳಸಬಾರದೆಂದು ಟಿಕ್​ ಹಾಕಲಾಗಿತ್ತು. ಇಲ್ಲಿಗೆ ಮುಗಿಯುವುದಿಲ್ಲ. ತಣ್ಣಗಾದ ಅನ್ನ, ಆಲೂಗಡ್ಡೆ ಸೇವನೆಗೂ ಅನುಮತಿಸುವುದಿಲ್ಲ. ಮೈಕ್ರೋವೇವ್​ ಆಹಾರವನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಆದರೆ ರೆಫ್ರಿಜರೇಟೆಡ್​ ಆಹಾರವನ್ನು ಅನುಮತಿಸುತ್ತದೆ.

ಜಾಲತಾಣದಲ್ಲಿ ಈ ಪಟ್ಟಿಯನ್ನು ಹಂಚಿಕೊಂಡ ನಂತರ ಸುಮಾರು 60,000 ಮಂದಿ ವೀಕ್ಷಿಸಿದ್ದಾರೆ, 11,000 ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ. “ಸರಿ, ತಿನ್ನಲು ಏನು ಉಳಿದಿದೆ” ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. “ಕಡಿಮೆ ಎಣ್ಣೆಯಿಂದ ಬೇಯಿಸಿದ ಕಲ್ಲು ಉಪ್ಪಿನೊಂದಿಗೆ ತಣ್ಣೀರು’ ಬಳಸಬುದೇ ಎಂದು ಇನ್ನೊಬ್ಬರು ಕಿಚಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...