alex Certify ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಸಂಸದೆ ನುಸ್ರತ್‌ ನೀಡಿದ್ದಾರೆ ಈ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಸಂಸದೆ ನುಸ್ರತ್‌ ನೀಡಿದ್ದಾರೆ ಈ ಉತ್ತರ

ಮೊದಲ ಮಗುವಿನ ಜನನದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್, ಕೋಲ್ಕತ್ತಾದಲ್ಲಿ ಸಲೋನ್ ಒಂದರ ಉದ್ಘಾಟನೆ ಮಾಡಲು ಆಗಮಿಸಿದ್ದರು.

ಆಗಸ್ಟ್ 26ರಂದು ಗಂಡು ಮಗುವಿಗೆ ಜನ್ಮವಿತ್ತ ನುಸ್ರತ್‌, ಇದಾದ ಕೆಲವೇ ವಾರಗಳ ಬಳಿಕ ತಮ್ಮ ಕೆಲಸ ಮುಂದುವರೆಸಲು ನಿರ್ಧರಿಸಿದ್ದಾರೆ.

ಇದೇ ವೇಳೆ, ಮಾಧ್ಯಮಗಳ ಮುಂದೆ ತಮ್ಮ ಮಗುವಿನ ತಂದೆಯ ಕುರಿತು ನುಸ್ರತ್‌ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ತಮ್ಮ ಪೋಸ್ಟ್‌ ಒಂದಕ್ಕೆ ಬಂದ ಕಾಮೆಂಟ್ ಒಂದರಲ್ಲಿ ತಮ್ಮ ಪುತ್ರನನ್ನು ಮೊದಲ ಬಾರಿಗೆ ಯಾವಾಗ ತೋರುವಿರಿ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದ ನುಸ್ರತ್‌, “ನೀವು ಅದಕ್ಕಾಗಿ ಆತನ ತಂದೆಯನ್ನು ಕೇಳಬೇಕು. ಸದ್ಯಕ್ಕೆ ಆತ ತನ್ನನ್ನು ನೋಡಲು ಯಾರಿಗೂ ಬಿಡುತ್ತಿಲ್ಲ” ಎಂದಿದ್ದರು.

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಬುಕ್‌ ಮಾಡಲು ಮುಂದಾಗಿದ್ದವರಿಗೆ ಶಾಕ್

ಇದೇ ವೇಳೆ ಮಗುವಿನ ತಂದೆಯ ಬಗ್ಗೆ ಕೇಳಿದಾಗ ಉತ್ತರಿಸಿದ ನುಸ್ರತ್‌, “ತಂದೆ ಯಾರೆಂದು ಖುದ್ದು ತಂದೆಗೇ ಗೊತ್ತಿರುತ್ತದೆ. ಸದ್ಯಕ್ಕೆ ನಾವು ಮಗುವಿನ ಜನ್ಮವನ್ನು ಸಂಭ್ರಮಿಸುತ್ತಿದ್ದೇವೆ. ನಾನು ಹಾಗೂ ಯಶ್ ಇಬ್ಬರೂ ಒಳ್ಳೆಯ ಕಾಲ ಕಳೆಯುತ್ತಿದ್ದೇವೆ,” ಎಂದು ನುಸ್ರತ್‌ ತಿಳಿಸಿದ್ದಾರೆ.

ಆಗಸ್ಟ್‌ 25ರಂದು ಪ್ರಸವ ವೇದನೆಯಿಂದ ಕೋಲ್ಕತ್ತಾದ ಆಸ್ಪತ್ರೆಯೊಂದಕ್ಕೆ ದಾಖಲಾದ ನುಸ್ರತ್‌ರನ್ನು ಆ ಸಂದರ್ಭದಲ್ಲಿ ಅವರ ಬಾಯ್‌ಫ್ರೆಂಡ್ ಹಾಗೂ ನಟ ಯಶ್ ದಾಸ್‌ ಗುಪ್ತಾ ಕರೆದುಕೊಂಡು ಬಂದಿದ್ದರು. ಹೆರಿಗೆಯಾದ ಕೂಡಲೇ ನುಸ್ರತ್‌ ಹಾಗೂ ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಯಶ್ ಸ್ಪಷ್ಟನೆ ನೀಡಿದ್ದರು.

ನುಸ್ರತ್‌‌ರ ಮಾಜಿ ಪತಿ ನಿಖಿಲ್ ಜೈನ್ ಈ ಬಗ್ಗೆ ಹೇಳಿಕೆ ಕೊಟ್ಟಿದ್ದರು, “ನಮ್ಮಿಬ್ಬರ ನಡುವೆ ವ್ಯತ್ಯಾಸಗಳಿರಬಹುದು. ಆದರೆ ತಾಯಿ ಹಾಗೂ ಮಗುವಿಗೆ ನನ್ನ ಶುಭಹಾರೈಕೆಗಳನ್ನು ತಿಳಿಸುತ್ತಿದ್ದೇನೆ. ಗಂಡುಮಗುವಿಗೆ ಒಳ್ಳೆಯ ಭವಿಷ್ಯ ಪ್ರಾಪ್ತಿಯಾಗಲಿ ಎಂದು ಹಾರೈಸುವೆ” ಎಂದು ಹೇಳಿದ್ದಾರೆ.

2019ರಲ್ಲಿ ಟರ್ಕಿಯಲ್ಲಿ ವಿವಾಹವಾಗಿದ್ದ ನುಸ್ರತ್‌ ಹಾಗೂ ನಿಖಿಲ್‌ರ ನಡುವೆ ಕೆಲ ತಿಂಗಳುಗಳ ಹಿಂದೆ ವಿರಸವೇರ್ಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...