alex Certify Netflixನಲ್ಲಿ ಖಾಲಿ ಇದೆ ಈ ಹುದ್ದೆ; ವಾರ್ಷಿಕ ಸಂಬಳ ಬರೋಬ್ಬರಿ 7.4 ಕೋಟಿ ರೂಪಾಯಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Netflixನಲ್ಲಿ ಖಾಲಿ ಇದೆ ಈ ಹುದ್ದೆ; ವಾರ್ಷಿಕ ಸಂಬಳ ಬರೋಬ್ಬರಿ 7.4 ಕೋಟಿ ರೂಪಾಯಿ….!

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ದೀರ್ಘಕಾಲದಿಂದಲೂ ಚರ್ಚೆಯ ವಿಷಯವಾಗಿದೆ. ಅದರ ಪರ ಮತ್ತು ವಿರೋಧಿ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ದೊಡ್ಡ ಪ್ರಮಾಣದಲ್ಲಿ ಜನರ ಉದ್ಯೋಗಕ್ಕೆ ಕುತ್ತು ತರುತ್ತದೆ ಅನ್ನೋದು ಹಲವರ ಅಭಿಪ್ರಾಯ. ಆದರೆ ಈ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಕನಸಿನ ಕೆಲಸವನ್ನು ಕೂಡ ಪಡೆಯಬಹುದು. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಹುದ್ದೆಯೊಂದು ಖಾಲಿ ಇದೆ.

ಕಂಪನಿಯು AI ಉತ್ಪನ್ನ ನಿರ್ವಾಹಕರನ್ನು ಹುಡುಕಾಟದಲ್ಲಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ವಿರುದ್ಧ ಹಾಲಿವುಡ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವಾಗಲೇ ನೆಟ್‌ಫ್ಲಿಕ್ಸ್ AI ಉತ್ಪನ್ನ ನಿರ್ವಾಹಕರ ಹುದ್ದೆಯನ್ನು ನೇಮಿಸುತ್ತಿದೆ. ಹಾಲಿವುಡ್‌ನ ಬರಹಗಾರರ ಸಂಘ ಮತ್ತು ಇತರ ಸಂಸ್ಥೆಗಳು ಮನರಂಜನಾ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಅಲ್ಗಾರಿದಮ್‌ಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆಯಿಂದ ಆಕ್ರೋಶಗೊಂಡಿವೆ.

ನೆಟ್‌ಫ್ಲಿಕ್ಸ್‌ನ ಉದ್ಯೋಗ ದೊರೆತರೆ ಜಾಕ್‌ಪಾಟ್‌ ಹೊಡೆದಂತೆಯೇ ಲೆಕ್ಕ. ಯಾಕಂದ್ರೆ ಈ ಹುದ್ದೆಗೆ ಸುಮಾರು 7.4 ಕೋಟಿ ರೂಪಾಯಿ ವಾರ್ಷಿಕ ವೇತನವನ್ನು ನೆಟ್‌ಫ್ಲಿಕ್ಸ್‌ ನೀಡುತ್ತಿದೆ. AI ಉತ್ಪನ್ನ ನಿರ್ವಾಹಕರ ಹೊರತಾಗಿ ನೆಟ್‌ಫ್ಲಿಕ್ಸ್‌ಗೆ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಇತರ ಹುದ್ದೆಗಳಿಗೂ ಆಕಾಂಕ್ಷಿಗಳ  ಅಗತ್ಯವಿದೆ. ಕಂಪನಿಯ ತಾಂತ್ರಿಕ ನಿರ್ದೇಶಕರ ಹುದ್ದೆ ಸಹ ಖಾಲಿ ಇದೆ. ಈ ಹುದ್ದೆಗೆ ಕಂಪನಿಯು ವಾರ್ಷಿಕ 4.5 ಲಕ್ಷದಿಂದ 6.5 ಲಕ್ಷ ಡಾಲರ್ ವೇತನವನ್ನು ನೀಡುತ್ತಿದೆ.

ಅಂದರೆ ನೆಟ್‌ಫ್ಲಿಕ್ಸ್ ಒಂದು ವರ್ಷದಲ್ಲಿ 3.70 ಕೋಟಿ ರೂ.ಗಳಿಂದ 5.35 ಕೋಟಿ ರೂ.ಗಳಷ್ಟು ಸಂಬಳವನ್ನು ತಾಂತ್ರಿಕ ನಿರ್ದೇಶಕರಿಗೆ ನೀಡಲಿದೆ. ಪ್ರಪಂಚದ ಅನೇಕ ದೊಡ್ಡ ಕಂಪನಿಗಳು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅನ್ನು ಹೆಚ್ಹೆಚ್ಚು ಬಳಸುತ್ತಿವೆ. ಮೈಕ್ರೋಸಾಫ್ಟ್, ಗೂಗಲ್‌ ಕೂಡ ಇವುಗಳಲ್ಲಿ ಸೇರಿವೆ. ಭಾರತದಲ್ಲಿ ಸಹ ಅನೇಕ ಸಂಸ್ಥೆಗಳು ಈಗಾಗಲೇ ಸಂಸ್ಥೆಗಳು AI ನಿರೂಪಕಿಯರನ್ನು  ಪರಿಚಯಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...