alex Certify ನಗು ತರಿಸುತ್ತೆ ಈ ಮರವನ್ನ ಕತ್ತರಿಸಿದ ರೀತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಈ ಮರವನ್ನ ಕತ್ತರಿಸಿದ ರೀತಿ…..!

ಇಂಗ್ಲೆಂಡ್​​ ದಕ್ಷಿಣ ಯಾರ್ಕ್​ಶೈರ್​ನ ನಿವಾಸಿಯೊಬ್ಬ ಮರವೊಂದನ್ನ ಸರಿಯಾಗಿ ಅರ್ಧ ಭಾಗಕ್ಕೆ ಕತ್ತರಿಸಿದ್ದು ಈ ಮೂಲಕ ಈ ಮರವು ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಿ ಬದಲಾಗಿದೆ.

ಪಕ್ಕದ ಮನೆಯವರು ಕಳೆದ 25 ವರ್ಷಗಳಿಂದ ತಲೆ ಎತ್ತಿದ್ದ ಫರ್​ ಜಾತಿಯ ಮರದ ಕೊಂಬೆಗಳನ್ನ ಅರ್ಧ ಕೊಂಬೆಗಳನ್ನ ಕತ್ತರಿಸಲು ಹೇಳಿದ ಬಳಿಕ 56 ವರ್ಷದ ಭರತ್​ ಮಿಸ್ತ್ರಿ ಹಾಗೂ ಕುಟುಂಬಸ್ಥರು ಕೆಲ ಕಾಲ ಶಾಕ್​ಗೊಳಗಾಗಿದ್ದರು.

ಅಂದಹಾಗೆ ಈ ಮರವನ್ನ ಈ ರೀತಿ ಕತ್ತರಿಸಲು ಕಾರಣವೇನು ಎಂಬ ಪ್ರಶ್ನೆ ಉದ್ಭವಿಸಬಹುದು.

ಈ ಮರದ ವಿಚಾರವಾಗಿ ಎರಡೂ ಕುಟುಂಬದ ನಡುವೆ ಬಹಳ ದಿನಗಳಿಂದ ವ್ಯಾಜ್ಯ ನಡೆಯುತ್ತಲೇ ಇತ್ತು. ಮರದ ಮೇಲೆ ಕೂತ ಪಾರಿವಾಳವು ಮಾಡುವ ಶಬ್ದ ಹಾಗೂ ಅವುಗಳ ಮಲ ವಿಸರ್ಜನೆಯಿಂದ ನೆರೆ ಮನೆಯವರು ಯಾವಾಗಲು ಕಿರಿಕಿರಿಗೆ ಒಳಗಾಗಿದ್ದರು.

ಹೀಗಾಗಿ ಒಪ್ಪಂದದ ಪ್ರಕಾರ ನೆರೆಮನೆಯವರು ತಮ್ಮ ಮನೆ ಬದಿಯಿದ್ದ ಮರವನ್ನ ಮಾತ್ರ ಕತ್ತರಿಸಿದ್ದಾರೆ. ಅರ್ಧ ಕತ್ತರಿಸಿದ ಮರವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಲಾಗಿದ್ದು ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...