alex Certify ಈ ಗ್ರಾಮದ ಅರ್ಧದಷ್ಟು ಜನ ವಿದೇಶದಲ್ಲಿ ನೆಲೆಸಿದ್ದಾರೆ ಎಂದರೆ ನೀವು ನಂಬಲೇಬೇಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗ್ರಾಮದ ಅರ್ಧದಷ್ಟು ಜನ ವಿದೇಶದಲ್ಲಿ ನೆಲೆಸಿದ್ದಾರೆ ಎಂದರೆ ನೀವು ನಂಬಲೇಬೇಕು…!

ಸಾಮಾನ್ಯವಾಗಿ ಹಳ್ಳಿಗಳೆಂದರೆ ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಅಲ್ಲಿ ಶಿಕ್ಷಣ ವ್ಯವಸ್ಥೆ ಸರಿ ಇರುವುದಿಲ್ಲ. ಹೀಗಾಗಿ ನಗರಕ್ಕೆ ವಲಸೆ ಹೋಗಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ವಿದೇಶಕ್ಕೆ ಕಳುಹಿಸಬೇಕು ಎನ್ನುವುದೇ ಎಲ್ಲರ ಬಯಕೆಯಾಗಿರುತ್ತದೆ. ಆದರೆ, ಇಲ್ಲೊಂದು ಹಳ್ಳಿಯ ಬಹುತೇಕ ಜನರು ವಿದೇಶಕ್ಕೆ ಹಾರಿದ್ದಾರೆ ಎಂದರೆ ನೀವು ನಂಬಲೇಬೇಕು…!

ಗುಜರಾತ್‌ ನ ಗಾಂಧಿನಗರ ಜಿಲ್ಲೆಯ ಡಿಂಗುಚಾ ಎಂಬ ಹಳ್ಳಿಯ ಅರ್ಧದಷ್ಟು ಜನರು ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಇಲ್ಲಿನ ಜನರು ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್, ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ನೆಲೆಸಿದ್ದಾರೆ. 7 ಸಾವಿರ ಜನಸಂಖ್ಯೆ ಇರುವ ಈ ಗ್ರಾಮದ ಸುಮಾರು 3 ಸಾವಿರಕ್ಕೂ ಅಧಿಕ ಜನರು ವಿದೇಶದಲ್ಲಿ ನೆಲೆ ನಿಂತಿದ್ದಾರೆ.

ಇಲ್ಲಿಯ ಜನರಿಗೆ ಇದೊಂದು ಖಯಾಲಿ ಎಂಬಂತಾಗಿದೆ. ಅಲ್ಲಿನ ಬಹುತೇಕರಿಗೆ ಎನ್ ಆರ್ ಐ ಆಗುವುದೇ ದೊಡ್ಡ ಯಶಸ್ಸು ಎಂಬುವಂತಾಗಿದೆ. ಹಲವರು ಕಾನೂನಿನ ರೀತಿಯಲ್ಲಿಯೇ ವಿದೇಶಕ್ಕೆ ಹೋದರೆ, ಇನ್ನೂ ಕೆಲವರು ಅಕ್ರಮವಾಗಿ ವಿದೇಶಕ್ಕೆ ಹೋಗಲು ಯತ್ನಿಸಿ ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೂಡ ತಿಳಿದು ಬಂದಿದೆ.

ಇಲ್ಲಿ ಅವಕಾಶಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಹಲವರು ಅವಕಾಶಗಳನ್ನು ಹುಡುಕಿ ವಿದೇಶಕ್ಕೆ ಹಾರುತ್ತಿದ್ದಾರೆ. ಹಲವರಿಗೆ ಅವಕಾಶ ಸಿಗದ ಕಾರಣ ಅನ್ಯ ಮಾರ್ಗದಿಂದಲೂ ತೆರಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಗ್ರಾಮದಲ್ಲಿ ಎಲ್ಲೆಂದರಲ್ಲಿ ಅಂತಾರಾಷ್ಟ್ರೀಯ ಟ್ರಾವೆಲ್ ಏಜೆಂಟ್‌ ಗಳಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಉತ್ತೀರ್ಣವಾಗುತ್ತಿದಂತೆ ಇಲ್ಲಿನ ವಿದ್ಯಾರ್ಥಿಗಳು ವಿದೇಶದತ್ತ ಮುಖ ಮಾಡುತ್ತಾರೆ. ಇಂಗ್ಲಿಷ್ ಭಾಷೆಯನ್ನು ಕೂಡ ಚೆನ್ನಾಗಿ ಕಲಿಯುತ್ತಿರುತ್ತಾರೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ವಿದೇಶಕ್ಕೆ ಹೋದವರು ಈ ಗ್ರಾಮದ ಅಭಿವೃದ್ಧಿಗೂ ಕೈ ಜೋಡಿಸಿದ್ದಾರೆ. ಸದ್ಯ ಈ ಹಳ್ಳಿಯನ್ನು ನೋಡಿದರೆ, ಯಾವುದೋ ಮುಂದುವರೆದ ಪಟ್ಟಣ ನೋಡಿದಂತಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...