alex Certify ಕೇರಳದಲ್ಲಿ ವೇಗವಾಗಿ ಹರಡುತ್ತಿದೆ ಮಕ್ಕಳಿಗೆ ಅಪಾಯಕಾರಿ ಮಂಪ್ಸ್‌ ಕಾಯಿಲೆ; ಇಲ್ಲಿದೆ ಸೋಂಕಿನ ಲಕ್ಷಣ ಮತ್ತು ಚಿಕಿತ್ಸೆಯ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳದಲ್ಲಿ ವೇಗವಾಗಿ ಹರಡುತ್ತಿದೆ ಮಕ್ಕಳಿಗೆ ಅಪಾಯಕಾರಿ ಮಂಪ್ಸ್‌ ಕಾಯಿಲೆ; ಇಲ್ಲಿದೆ ಸೋಂಕಿನ ಲಕ್ಷಣ ಮತ್ತು ಚಿಕಿತ್ಸೆಯ ವಿವರ

ಮಂಪ್ಸ್ ಎಂದು ಕರೆಯಲ್ಪಡುವ ಕಾಯಿಲೆಯೊಂದು ಕೇರಳದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಮಾರ್ಚ್ 10ರಂದು ಒಂದೇ ದಿನ ರಾಜ್ಯದಲ್ಲಿ 190 ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲಿನ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಈ ತಿಂಗಳು 2,505 ವೈರಲ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. 2024ರ ಎರಡು ತಿಂಗಳ ಅವಧಿಯಲ್ಲಿ 11,467 ಪ್ರಕರಣಗಳು ಪತ್ತೆಯಾಗಿವೆ.

ಮಂಪ್ಸ್ ತಡೆಗಟ್ಟುವ ಪ್ರಮುಖ ವಿಧಾನವೆಂದರೆ ಈ ಸೋಂಕಿನ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದು. ಏಕೆಂದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬಹಳ ವೇಗವಾಗಿ ಹರಡುತ್ತದೆ.

ಮಂಪ್ಸ್ ಎಂದರೇನು?

ಮಂಪ್ಸ್ ಒಂದು ರೀತಿಯ ವೈರಲ್ ಸೋಂಕು. ಅದು ಪರೋಟಿಡ್ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ. ಎರಡೂ ಕೆನ್ನೆಗಳ ಬದಿಗಳಲ್ಲಿ ಲಾಲಾರಸವನ್ನು ಉತ್ಪಾದಿಸುತ್ತದೆ. ಸೀನು, ಕೆಮ್ಮು, ಚುಂಬನ ಮತ್ತು ಕಲುಷಿತ ನೀರನ್ನು ಕುಡಿಯುವುದರಿಂದ ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈ ಸೋಂಕು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಯಾವುದೇ ವಯಸ್ಸಿನ ವ್ಯಕ್ತಿ ಕೂಡ ಅದರಿಂದ ಪ್ರಭಾವಿತರಾಗಬಹುದು.

ಮಂಪ್ಸ್‌ ರೋಗಲಕ್ಷಣಗಳು

ಕುತ್ತಿಗೆಯ ಬಳಿ ಊತ ಮತ್ತು ನೋವು

ಜಗಿಯಲು ತೊಂದರೆ

ಜ್ವರ

ತಲೆನೋವು

ಸ್ನಾಯು ನೋವು

ನಿರಂತರವಾಗಿ ದಣಿದ ಭಾವನೆ

ಹಸಿವಾಗದೇ ಇರುವುದು

ವಯಸ್ಕರಲ್ಲಿ ವೃಷಣಗಳಲ್ಲಿ ನೋವು ಮತ್ತು ಮೃದುತ್ವ

ಮಂಪ್ಸ್ ಎಷ್ಟು ಅಪಾಯಕಾರಿ?

ಕೆಲವು ಸಂದರ್ಭಗಳಲ್ಲಿ ಈ ರೋಗ ಗಂಭೀರ ಸ್ವರೂಪ ಪಡೆಯಬಹುದು. ಮಕ್ಕಳಲ್ಲಿ ಕಿವುಡುತನ ಮತ್ತು ಮೆದುಳಿನ ಊತಕ್ಕೆ ಇದು ಕಾರಣವಾಗುತ್ತದೆ. ಇದರಿಂದಾಗಿ ರೋಗಿಯು ಸಾಯಬಹುದು.

ಮಂಪ್ಸ್‌ಗೆ ಚಿಕಿತ್ಸೆ ಏನು?

ಈ ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲ. ವಿಶ್ರಾಂತಿ, ಆರೋಗ್ಯಕರ ಆಹಾರ ಮತ್ತು ದ್ರವ ಸೇವನೆಯಿಂದ ಈ ಸೋಂಕು 3-10 ದಿನಗಳಲ್ಲಿ ಗುಣವಾಗುತ್ತದೆ. ಹಾಗಾಗದೇ ಇದ್ದಲ್ಲಿ ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ.

ಈ ರೋಗವನ್ನು ತಡೆಗಟ್ಟಬೇಕೆಂದರೆ ಎಂಜಲು ಪದಾರ್ಥಗಳನ್ನು ತಿನ್ನಬೇಡಿ. ಇನ್ಯಾರೋ ಕುಡಿದ ನೀರು, ಜ್ಯೂಸ್‌ ಅಥವಾ ಇನ್ನಿತರ ದ್ರವ ಆಹಾರಗಳನ್ನು ಕೂಡ ಸೇವಿಸಬಾರದು. ಕೆಮ್ಮುವಾಗ ಅಥವಾ ಸೀನುವಾಗ ಜನರಿಂದ ದೂರವಿರಿ. ಇದರೊಂದಿಗೆ MMR (ಮಂಪ್ಸ್-ದಡಾರ, ರುಬೆಲ್ಲಾ) ಲಸಿಕೆ ಪಡೆಯಿರಿ. ಈ ಲಸಿಕೆಯನ್ನು 12-15 ತಿಂಗಳ ವಯಸ್ಸಿನ ನಂತರ ಯಾವುದೇ ಸಮಯದಲ್ಲಿ ಪಡೆಯಬಹುದು. ಈ ರೋಗವು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ಬಾಲ್ಯದಲ್ಲಿಯೇ ಲಸಿಕೆ ಹಾಕಿಸಿಕೊಳ್ಳುವುದು ಪ್ರಯೋಜನಕಾರಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...