alex Certify Mumbai: ಜನವಸತಿ ಪ್ರದೇಶದಲ್ಲಿಯೇ ಡ್ರಗ್ಸ್ ಸೇವನೆ; ಫೋಟೋ – ವಿಡಿಯೋ ಪೊಲೀಸರಿಗೆ ಟ್ಯಾಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Mumbai: ಜನವಸತಿ ಪ್ರದೇಶದಲ್ಲಿಯೇ ಡ್ರಗ್ಸ್ ಸೇವನೆ; ಫೋಟೋ – ವಿಡಿಯೋ ಪೊಲೀಸರಿಗೆ ಟ್ಯಾಗ್

ಮುಂಬೈ ಮಹಾನಗರದಲ್ಲಿ ಡ್ರಗ್ಸ್ ದಂಧೆ ಸಾಮಾನ್ಯವಾಗಿದೆ. ಈ ಬಗ್ಗೆ ನಾಗರಿಕರು ಸಾರ್ವಜನಿಕ ವೇದಿಕೆಯಲ್ಲಿ ಧ್ವನಿಯೆತ್ತಿದ್ದಾರೆ.

ಇತ್ತೀಚೆಗೆ, ಬೋರಿವಲಿ ವೆಸ್ಟ್ ನ ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆ ಬಳಿಯ ವಸತಿ ಕಾಲೋನಿಯಲ್ಲಿ ಹುಡುಗರ ಗುಂಪೊಂದು ಮದ್ಯ, ಮಾದಕ ದ್ರವ್ಯ ಸೇವನೆ ಮಾಡುತ್ತಿರುವುದು ಕಂಡುಬಂದಿದೆ.

ಘಟನೆಯನ್ನು ಮುಂಬೈ ಆವಾಜ್ ಹ್ಯಾಂಡಲ್ ಟ್ವಿಟರ್‌ನಲ್ಲಿ ವರದಿ ಮಾಡಲಾಗಿದ್ದು, ಕ್ರಮಕ್ಕಾಗಿ ಒತ್ತಾಯಿಸಲಾಗಿದೆ. ಈ ಯುವಕರ ಗುಂಪು ಜೈರಾಜ್ ನಗರ ಮತ್ತು ಅಶೋಕ್ ನಗರದ ಮೂಲೆಯಲ್ಲಿರುವ ಸ್ಥಳದಲ್ಲಿ ಭೇಟಿಯಾಗಿ ಡ್ರಗ್ಸ್ ಸೇವಿಸುತ್ತದೆ ಎಂದು ಹೇಳಲಾಗಿದೆ.

ಘಟನೆಯ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

ಈ ಹಿಂದೆ ಮಾರ್ಚ್ 16 ರಂದು ಪಾಯಲ್ ಶಾ ಎಂಬ ಟ್ವಿಟ್ಟರ್ ಬಳಕೆದಾರರು ಆಂಟಾಪ್ ಹಿಲ್ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಡ್ರಗ್ಸ್ ಮಾರಾಟ ಮತ್ತು ಮದ್ಯ ಬಳಕೆ ವಿಪರೀತವಾಗಿದೆ ಎಂದು ಫೋಟೋ ಸಮೇತ ಟ್ವೀಟ್ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...