alex Certify ಹರಾಜಿನಲ್ಲಿ ಲ್ಯಾಂಡ್‌ ರೋವರ್‌ ನ ವಿಂಟೇಜ್ ಕಾರು ಗೆದ್ದ ಧೋನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜಿನಲ್ಲಿ ಲ್ಯಾಂಡ್‌ ರೋವರ್‌ ನ ವಿಂಟೇಜ್ ಕಾರು ಗೆದ್ದ ಧೋನಿ

ಟೀಂ ಇಂಡಿಯಾದ ಕ್ರಿಕೆಟ್ ತಂಡದ ಫಾರೆವರ್‌ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಮ್ಮ ಆಟದಿಂದ ಎಷ್ಟು ಸುದ್ದಿ ಮಾಡುತ್ತಾರೂ ಹಾಗೇ ತಮ್ಮ ಬೈಕ್ ಮತ್ತು ಕಾರುಗಳ ಕಲೆಕ್ಷನ್ ವಿಚಾರದಲ್ಲೂ ಸದ್ದು ಮಾಡುತ್ತಾರೆ.

ಕಳೆದ ತಿಂಗಳ ಬಿಗ್ ಬಾಯ್ ಟಾಯ್ಜ್‌ ಹರಾಜಿನಲ್ಲಿ ಭಾಗಿಯಾದ ಧೋನಿ, ತಮ್ಮ ಗರಾಜಿಗೆ ಲ್ಯಾಂಡ್‌ ರೋವರ್‌‌ 3ಯ ವಿಂಟೇಜ್ ಕಾರನ್ನು ಡ್ರೈವ್ ಮಾಡಿಕೊಂಡು ಬಂದಿದ್ದಾರೆ.

ವಿಂಟೇಜ್ ಕಾರಿನೊಂದಿಗೆ ಫೋಟೋ ಶೇರ್‌ ಮಾಡಿದ ಗೇಲ್‌

ಗುರುಗ್ರಾಮದ ಬಿಗ್ ಬಾಯ್ ಟಾಯ್ಜ್‌ ಹರಾಜಿನಲ್ಲಿ ವಿಂಟೇಜ್ ಕಾರುಗಳ ಮಾಡೆಲ್‌ಗಳು ಸಿಗುತ್ತವೆ. ಲ್ಯಾಂಡ್ ರೋವರ್‌ 3 ಮೇಲೆ ಧೋನಿ ಆಸಕ್ತಿ ತೋರಿ, ಕೊನೆಗೆ ಬಿಡ್‌ನಲ್ಲಿ ಗೆದ್ದಿದ್ದಾರೆ. ಸ್ಟಾಕ್‌ನ 50%ನಷ್ಟನ್ನು ಆನ್ಲೈನ್ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ .

ತಮ್ಮ ವೈಯಕ್ತಿಕ ಕಲೆಕ್ಷನ್‌ನಲ್ಲಿ ಧೋನಿ ಸಾಕಷ್ಟು ಕಾರುಗಳು ಮತ್ತು ಬೈಕ್‌ ಗಳನ್ನು ಹೊಂದಿದ್ದಾರೆ. ಆಡಿ ಕ್ಯೂ7, ಮರ್ಸಿಡಿಸ್-ಬೆಂಜ಼್ ಜಿಎಲ್‌ಇ ಮತ್ತು ಜೀಪ್ ಗ್ರಾಂಡ್ ಚೆರೋಕಿ ಟ್ರ‍್ಯಾಕ್‌ಹಾಕ್‌ನಂಥ ಸೂಪರ್‌ ಕಾರುಗಳನ್ನು ಹೊಂದಿರುವ ಧೋನಿ ಬಳಿ ಯಮಾಹಾ ಆರ್‌ಡಿ350, ಕಾನ್ಫೆಡರೇಟ್ ಹೆಲ್‌ಕ್ಯಾಟ್‌ ಎಕ್ಸ್‌32, ಬಿಎಸ್‌ಎ ಗೋಲ್ಡ್‌ಸ್ಟಾರ್‌, ಹಾರ್ಲೆ-ಡೇವಿಡ್ಸನ್ ಫ್ಯಾಟ್ಬಾಯ್, ಕಾವಾಸಾಕಿ ನಿಂಜಾ ಜ಼ಡ್‌ಎಕ್ಸ್‌14ಆರ್‌ ಮತ್ತು ಕಾವಾಸಾಕಿ ನಿಂಜಾ ಎಚ್‌2 ಬೈಕ್‌ಗಳು ಸಹ ಇವೆ.

1970ರ ದಶಕದಲ್ಲಿ ಅಭಿವೃದ್ಧಿಪಡಿಸಲಾದ ಲ್ಯಾಂಡ್ ರೋವರ್‌ 3, 1980ರ ಮಧ್ಯಭಾಗದವರೆಗೂ ಭಾರೀ ಡಿಮ್ಯಾಂಡ್‌ನಲ್ಲಿತ್ತು. 2.25 ಲೀಟರ್‌ ಇಂಜಿನ್‌ನೊಂದಿಗೆ ಮ್ಯಾನುವಲ್ ಟ್ರಾನ್ಸ್‌ಮಿಶನ್ ಈ ಕಾರಿನ ವಿಶೇಷಣಗಳಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...