alex Certify ನಗ್ನ ಚಿತ್ರ ಸೆರೆಹಿಡಿದ ಕಿಡಿಗೇಡಿ ಬೆನ್ನಟ್ಟಿ ಹಿಡಿದ ವಿದ್ಯಾರ್ಥಿನಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗ್ನ ಚಿತ್ರ ಸೆರೆಹಿಡಿದ ಕಿಡಿಗೇಡಿ ಬೆನ್ನಟ್ಟಿ ಹಿಡಿದ ವಿದ್ಯಾರ್ಥಿನಿಯರು

ಬೆಂಗಳೂರು: ಕಾಲೇಜಿನ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ವಿಡಿಯೋ ತೆಗೆದ ಹಳೆ ವಿದ್ಯಾರ್ಥಿಯನ್ನು ಜಯನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.

ವೈಟ್ಫೀಲ್ಡ್ ನಿವಾಸಿಯಾಗಿರುವ ಯುವಕ ಜಯನಗರ 7ನೇ ಹಂತ ಸಮೀಪದ ಖಾಸಗಿ ಕಾಲೇಜಿನಲ್ಲಿ ಈ ಕೃತ್ಯವೆಸಗಿದ್ದಾನೆ. ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ,

ಫೆಬ್ರವರಿ 17ರಂದು ಕಾಲೇಜಿನ ಮೊದಲ ಮಹಡಿಯಲ್ಲಿರುವ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ತೆರಳಿದ್ದ ಆರೋಪಿ ಮೊಬೈಲ್ ಇಟ್ಟು ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದಾನೆ. ಮೊಬೈಲ್ ನೋಡಿದ ವಿದ್ಯಾರ್ಥಿನಿಯೊಬ್ಬರು ಜೋರಾಗಿ ಕಿರುಚಾಡಿದ್ದು, ಕೆಲ ವಿದ್ಯಾರ್ಥಿನಿಯರು ಒಳಗೆ ಧಾವಿಸಿ ನೋಡಿದಾಗ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನ ಬೆನ್ನಟ್ಟಿ ಹಿಡಿದ ವಿದ್ಯಾರ್ಥಿನಿಯರು ಮೊಬೈಲ್ ಪರಿಶೀಲಿಸಿದಾಗ ಅಶ್ಲೀಲ ಚಿತ್ರಗಳು ಪತ್ತೆಯಾಗಿವೆ. ತಕ್ಷಣವೇ ಪ್ರಾಂಶುಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...