alex Certify ಇದೇ ನೋಡಿ ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ವಿಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ನೋಡಿ ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ವಿಮಾನ

Rolls-Royce says 'Spirit of Innovation' electric plane is world's fastest EVರೋಲ್ಸ್‌ ರಾಯ್ಸ್‌ನ ’ಸ್ಪಿರಿಟ್ ಆಫ್ ಇನೋವೇಷನ್’ ಹೆಸರಿನ ಎಲೆಕ್ಟ್ರಿಕ್ ವಿಮಾನವು ಸದ್ಯದ ಮಟ್ಟಿಗೆ ಜಗತ್ತಿನ ಅತ್ಯಂತ ವೇಗದ ಎಲೆಕ್ಟ್ರಿಕ್ ವಿಮಾನವೆಂಬ ಶ್ರೇಯಕ್ಕೆ ಪಾತ್ರವಾಗಿದೆ.

ಹೊಸದಾಗಿ ಮೂರು ದಾಖಲೆಗಳನ್ನು ಸೃಷ್ಟಿಸಿರುವ ಈ ವಿಮಾನವು ಮೂರು ಕಿಮೀಗಳಷ್ಟು ದೂರವನ್ನು 556 ಕಿಮೀ/ಗಂಟೆ ವೇಗದಲ್ಲಿ ಕ್ರಮಿಸಿದೆ. ಈ ಹಿಂದೆ 213ಕಿಮೀ/ಗಂಟೆಯೇ ಎಲೆಕ್ಟ್ರಿಕ್ ವಿಮಾನವೊಂದರ ಅತ್ಯಂತ ವೇಗದ ಹಾರಾಟವಾಗಿತ್ತು.

ಬ್ರಿಟನ್‌‌ನ ರಕ್ಷಣಾ ಸಚಿವಾಲಯದ ಬಾಸ್ಕೋಂಬೆ ಡೌನ್ ವೈಮಾನಿಕ ಪ್ರಯೋಗದ ತಾಣದಲ್ಲಿ ನಡೆದ ಪರೀಕ್ಷೆಯಲ್ಲಿ ಈ ರೋಲ್ಸ್‌ ರಾಯ್ಸ್‌ನ ಈ ವಿಮಾನವು 532.1ಕಿಮೀ/ಗಂಟೆಯ ವೇಗ ಸಾಧಿಸಿದೆ. ಜೊತೆಗೆ 202 ಸೆಕೆಂಡ್‌ಗಳಲ್ಲಿ 3000 ಮೀಟರ್‌ಗಳ ಎತ್ತರ ತಲುಪಿದ ವಿಮಾನ, ಈ ಎತ್ತರ ಸಾಧಿಸಲು ತೆಗೆದುಕೊಂಡ ಸಮಯದಲ್ಲೂ 60 ಸೆಕೆಂಡ್‌ಗಳ ಅಂತರದಿಂದ ದಾಖಲೆ ಸೃಷ್ಟಿಸಿದೆ.

ಗಂಟೆಗೆ 623ಕಿಮೀ ವೇಗದಲ್ಲಿ ಕ್ರಮಿಸಬಲ್ಲ ರೋಲ್ಸ್‌ ರಾಯ್ಸ್‌ ಎಲೆಕ್ಟ್ರಿಕ್ ವಿಮಾನದ ಈ ಶರವೇಗವನ್ನು ಫೆಡರೇಷನ್ ಏರೋನಾಟಿಕ್ ಇಂಟರ್ನ್ಯಾಷನಲ್‌ (ಎಫ್‌ಎಐ) ಅಧಿಕೃತವಾಗಿ ಮಾನ್ಯೀಕರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...