alex Certify 14 ಸಾವಿರ ಸಿಬ್ಬಂದಿ ಕೆಲಸದಿಂದ ಕೈಬಿಡಲು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14 ಸಾವಿರ ಸಿಬ್ಬಂದಿ ಕೆಲಸದಿಂದ ಕೈಬಿಡಲು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ನಿರ್ಧಾರ

ವಾಷಿಂಗ್ಟನ್: ಬರೋಬ್ಬರಿ 14 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ನಿರ್ಧರಿಸಿದೆ.

ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಇಳಿಕೆ ಕಂಡು ಬಂದ ಬೆನ್ನಲ್ಲೇ ಅಮೆರಿಕದ ಟೆಸ್ಲಾ ಕಂಪನಿ ಜಾಗತಿಕವಾಗಿ ತನ್ನ ಒಟ್ಟು ಸಿಬ್ಬಂದಿಗಳ ಪೈಕಿ ಶೇಕಡ 10 ರಷ್ಟು ಉದ್ಯೋಗಿಗಳನ್ನು ಕೈ ಬಿಡಲಿದೆ.

ಟೆಸ್ಲಾದಿಂದ ಸುಮಾರು 14 ಸಾವಿರ ಸಿಬ್ಬಂದಿಗಳನ್ನು ನೌಕರಿಯಿಂದ ತೆಗೆದು ಹಾಕುವ ನಿರ್ಧಾರ ಪ್ರಕಟಿಸಲಾಗಿದೆ. ವೆಚ್ಚ ಕಡಿತ ಮತ್ತು ದೊಡ್ಡ ಮಟ್ಟದಲ್ಲಿ ಕಂಪನಿ ಪುನಾರಚನೆ ಭಾಗವಾಗಿ ಶೇಕಡ 10ರಷ್ಟು ಹುದ್ದೆಗಳನ್ನು ಮಾಡಲಾಗುವುದು ಎಂದು ಹೇಳಲಾಗಿದೆ.

ನಾವು ನಮ್ಮ ಮುಂದಿನ ಹಂತದ ಬೆಳವಣಿಗೆಗೆ ಕಂಪನಿಯನ್ನು ಸಿದ್ಧಪಡಿಸುತ್ತಿರುವಾಗ, ವೆಚ್ಚ ಕಡಿತ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಕಂಪನಿಯ ಪ್ರತಿಯೊಂದು ಅಂಶವನ್ನು ನೋಡುವುದು ಬಹಳ ಮುಖ್ಯ. ಈ ಪ್ರಯತ್ನದ ಭಾಗವಾಗಿ, ನಾವು ಸಂಸ್ಥೆಯ ಸಂಪೂರ್ಣ ವಿಮರ್ಶೆಯನ್ನು ಮಾಡಿದ್ದೇವೆ. ಜಾಗತಿಕವಾಗಿ ನಮ್ಮ ಸಿಬ್ಬಂದಿ ಸಂಖ್ಯೆಯನ್ನು 10% ಕ್ಕಿಂತ ಹೆಚ್ಚು ಕಡಿಮೆ ಮಾಡುವ ಕಠಿಣ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಇ-ಮೇಲ್ ನಲ್ಲಿ ಸಂದೇಶ ಕಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...