alex Certify ಹೀಲಿಯಂ ಅನಿಲ ಸೇವಿಸಿದ ವಿರಾಟ್​ ಕೊಹ್ಲಿ ಮಾಡಿದ್ದೇನು ನೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಲಿಯಂ ಅನಿಲ ಸೇವಿಸಿದ ವಿರಾಟ್​ ಕೊಹ್ಲಿ ಮಾಡಿದ್ದೇನು ನೋಡಿ..!

ಟೀಂ ಇಂಡಿಯಾ ಟೆಸ್ಟ್​ ವಿಭಾಗದ ನಾಯಕ ವಿರಾಟ್​ ಕೊಹ್ಲಿ ಹೀಲಿಯಂ ಸೇವಿಸಿದ ಧ್ವನಿಯಲ್ಲಿ ಮಾತನಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪುಮಾ ಬ್ರ್ಯಾಂಡ್​ ಜೊತೆಗಿನ ಅಸೋಸಿಯೇಷನ್​​ನಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಕೊಹ್ಲಿಯ ಇಂತಹದ್ದೊಂದು ಮನರಂಜನೆಯ ವಿಡಿಯೋ ವೈರಲ್​ ಆಗಿದೆ.

ಹೀಲಿಯಂ ಬಲೂನಿನಲ್ಲಿ ಗಾಳಿಯನ್ನು ಸೇವಿಸಿದ ವಿರಾಟ್​ ಕೊಹ್ಲಿ ತಮ್ಮ ಬಗ್ಗೆ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಲಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹೀಲಿಯಂ ಸೇವಿಸಿದ್ದರಿಂದ ಕೊಹ್ಲಿಯ ಧ್ವನಿ ತಮಾಷೆಯ ರೀತಿಯಲ್ಲಿ ಕೇಳಿದೆ. ಖಾಸಗಿ ಜೆಟ್​ ಹೊಂದಿದ್ದೀರೇ ಎಂಬ ಪ್ರಶ್ನೆಯಿಂದ ಹಿಡಿದು ಬಾಲ್ಯದಲ್ಲಿ ವ್ಯಾಸಂಗ ಹೇಗೆ ಮಾಡುತ್ತಿದ್ರಿ ಎಂಬ ಪ್ರಶ್ನೆಗೆ ಹೀಲಿಯಂ ಧ್ವನಿಯಲ್ಲಿಯೇ ಉತ್ತರಿಸಿದ್ದಾರೆ.

ಕುಟುಂಬ ಸಮೇತ ದುಬೈಗೆ ಯಡಿಯೂರಪ್ಪ

ಇದು ನನಗೆ ಮೊದಲ ಅನುಭವವಾಗಿದ್ದು ಇದು ಯಾವ ರೀತಿ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಮೊದಲು ಹೇಳಿದ್ದಾರೆ. ಹೀಲಿಯಂ ಅನಿಲವನ್ನು ಸೇವಿಸಿದ ಬಳಿಕ ಕೊಹ್ಲಿ ತಮ್ಮ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ತನ್ನ ತಮಾಷೆಯ ಧ್ವನಿಯನ್ನು ಕೇಳಿಸಿಕೊಂಡ ಬಳಿಕ ಸ್ವತಃ ವಿರಾಟ್​ ಕೊಹ್ಲಿಯೇ ಬಿದ್ದು ಬಿದ್ದು ನಕ್ಕಿದ್ದಾರೆ. ನಿಮ್ಮ ವೃತ್ತಿ ಏನು..? ಎಂಬ ಪ್ರಶ್ನೆಗೆ ನಾನು ಕ್ರಿಕೆಟ್​ ಆಡುತ್ತೇನೆ ಎಂದು ಕೊಹ್ಲಿ ನಿಮಗೆ ಸಹಾಯವಾಣಿ ಇದೆಯೇ ಎಂಬ ಪ್ರಶ್ನೆಗೆ 181818 ನನ್ನ ಸಹಾಯವಾಣಿ. ಆದರೆ ನೀವಿದಕ್ಕೆ ಫೋನ್​ ಮಾಡಬೇಡಿ ಎಂದು ಉತ್ತರಿಸಿದ್ದಾರೆ. ಇದೇ ರೀತಿ ಅನೇಕ ಪ್ರಶ್ನೆಗಳಿಗ ಕೊಹ್ಲಿ ಉತ್ತರ ನೀಡಿದ್ದು ವಿಡಿಯೋ ವೈರಲ್​ ಆಗಿದೆ.

— Virat Kohli (@imVkohli) December 22, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...