alex Certify 14 ನೇ ವಯಸ್ಸಿನಲ್ಲಿ ಮಮ್ಮುಟ್ಟಿ ಜೊತೆ ಅಭಿನಯ; 100 ಬಾರಿ ರಿಜೆಕ್ಟ್ ಆದ ನಟಿಯದ್ದು 25 ವರ್ಷ ವಠಾರದಲ್ಲೇ ವಾಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14 ನೇ ವಯಸ್ಸಿನಲ್ಲಿ ಮಮ್ಮುಟ್ಟಿ ಜೊತೆ ಅಭಿನಯ; 100 ಬಾರಿ ರಿಜೆಕ್ಟ್ ಆದ ನಟಿಯದ್ದು 25 ವರ್ಷ ವಠಾರದಲ್ಲೇ ವಾಸ…!

ತನ್ನ 14 ನೇ ವಯಸ್ಸಿನಲ್ಲೇ ಮುಮ್ಮುಟ್ಟಿಯವರೊಂದಿಗೆ ಅಭಿನಯಿಸಿದ್ದ ನಟಿ 25 ವರ್ಷದವರೆಗೆ ವಠಾರದಲ್ಲಿ ನೆಲೆಸಿದ್ದರು ಎಂದರೆ ನಂಬುತ್ತೀರಾ ? ಯಾಕೆಂದರೆ ಕಲಾವಿದರು ಸಿನಿಮಾರಂಗ ಪ್ರವೇಶಿಸಿದ ನಂತರ ಅವರ ಜೀವನ ಮಟ್ಟ ಮತ್ತು ಶೈಲಿ ಬದಲಾಗುತ್ತದೆ. ಆದರೆ ಆ ನಟಿ ತನ್ನ 14ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿ ಸೂಪರ್ ಸ್ಟಾರ್ ಜೊತೆ ಕಾಣಿಸಿಕೊಂಡಿದ್ದರು. ಬಳಿಕ ಬಾಲಿವುಡ್ ನಲ್ಲಿ ರಾಜ್‌ಕುಮಾರ್ ಹಿರಾನಿ ಅವರೊಂದಿಗೆ ಎರಡು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿ ಹೆಸರು ಮಾಡಿದ ಬಳಿಕವೂ ವಠಾರದಲ್ಲಿ ನೆಲಿಸಿದ್ದರು. ಅವರೇ ಮುಂಬೈ ಮೂಲದ ನಟಿ ಪ್ರಿಯಾ ಬಾಪಟ್ .

ಪ್ರಿಯಾ ಬಾಪಟ್ ತಮ್ಮ 14 ನೇ ವಯಸ್ಸಿನಲ್ಲಿ ಮಮ್ಮುಟ್ಟಿ ಅವರೊಂದಿಗೆ ಡಾ ಬಾಬಾಸಾಹೇಬ್ ಅಂಬೇಡ್ಕರ್ ಚಲನಚಿತ್ರದೊಂದಿಗೆ ಪದಾರ್ಪಣೆ ಮಾಡಿದರು. ನಂತರ ಅವರು ರಾಜ್‌ಕುಮಾರ್ ಹಿರಾನಿ ಅವರ ಹಿಟ್ ಚಿತ್ರಗಳಾದ ʼಮುನ್ನಾ ಭಾಯಿ M.B.B.Sʼ ನಲ್ಲಿ ಕೆಲಸ ಮಾಡಿದರು. ಈ ಚಲನಚಿತ್ರವು 2003 ರಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ʼಲಗೇ ರಹೋ ಮುನ್ನಾ ಭಾಯ್ʼ ಚಿತ್ರದಲ್ಲೂ ಅವರು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಂತರವೂ ಅವರು ದಾದರ್‌ನ ರಾನಡೆ ರಸ್ತೆಯಲ್ಲಿರುವ ವಠಾರದಲ್ಲಿ ವಾಸಿಸುತ್ತಿದ್ದರು ಎಂದು ನಟಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ನಟಿ ಒಮ್ಮೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತನ್ನ ಬಾಲ್ಯದಿಂದ ಹಿಡಿದು ಮದುವೆಯಾದ 25 ವರ್ಷದ ತನಕ ವಠಾರದಲ್ಲೇ ಕಳೆದಿದ್ದಾಗಿ ತಿಳಿಸಿದ್ದರು.

“ನನ್ನ ಜೀವನದ ಸುಮಾರು 25 ವರ್ಷಗಳನ್ನು ನಾನು ವಠಾರದಲ್ಲೇ ಕಳೆದಿದ್ದೇನೆ. ನಾನು ಮದುವೆಯಾಗುವವರೆಗೂ ಅಲ್ಲೇ ಇದ್ದೆ. ದೀಪಾವಳಿಯನ್ನು ಒಟ್ಟಿಗೆ ಆಚರಿಸುವುದರಿಂದ ಹಿಡಿದು ಬಾಲ್ಯದ ದಿನಗಳಲ್ಲಿ ನನ್ನ ಸ್ನೇಹಿತರೊಂದಿಗೆ ಆಟವಾಡುವವರೆಗೆ ಆ ವಠಾರ ನನಗೆ ಬಹಳಷ್ಟು ನೆನಪುಗಳನ್ನು ನೀಡಿದೆ” ಎಂದು ಅವರು ಹೇಳಿದರು.

“ಆ ವಠಾರದ ವಿಶೇಷತೆ ಏನೆಂದರೆ ಒಂದು ಮಹಡಿಯಲ್ಲಿರುವ ಎಲ್ಲಾ ಮನೆಗಳು ಪರಸ್ಪರ ಆಂತರಿಕವಾಗಿ ಬಾಗಿಲುಗಳ ಮೂಲಕ ಸಂಪರ್ಕ ಹೊಂದಿದ್ದವು. ಆದ್ದರಿಂದ ಮನೆಯಿಂದ ಹೊರಬರದೆ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಲು ಸುಲಭವಾಗಿ ಸಾಧ್ಯವಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅಪಾರ್ಟ್ಮೆಂಟ್ ವ್ಯವಸ್ಥೆಯು ಜನರ ನಡುವೆ ಅಂತರವನ್ನು ಸೃಷ್ಟಿಸಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದರು. ಐಷಾರಾಮಿ ಅಪಾರ್ಟ್‌ಮೆಂಟ್ ಅಥವಾ ವಠಾರ ಇವುಗಳಲ್ಲಿ ಯಾವುದನ್ನು ಹೆಚ್ಚು ಇಷ್ಟಪಡುತ್ತೀರಿ ಎಂದು ಕೇಳಿದಾಗ, ‘ಇದು ವ್ಯಕ್ತಿಯ ಅಗತ್ಯಗಳನ್ನು ಅವಲಂಬಿಸಿರುತ್ತದೆ, ಅಭಿವೃದ್ಧಿಯೊಂದಿಗೆ ಅಗತ್ಯಗಳು ಬದಲಾಗುತ್ತವೆ. ನಾನು ಈಗ ಐಷಾರಾಮಿ ಅಪಾರ್ಟ್ಮೆಂಟ್‌ನಲ್ಲಿದ್ದೇನೆ ಆದರೆ ವಠಾರ ನನ್ನ ಮೊದಲ ಪ್ರೀತಿ’ ಎಂದರು.

ಅಂದಹಾಗೆ ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ಮರಾಠಿ ನಟಿಯರಲ್ಲಿ ಒಬ್ಬರಾಗಿರುವ ಪ್ರಿಯಾ ಬಾಪಟ್, ಪ್ರತಿ ಚಿತ್ರಕ್ಕೆ 8 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ವರದಿಯಾಗಿದೆ. 6ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಕ್ಯಾಮರಾ ಎದುರಿಸಿ ಮೊದಲ ಸಂಬಳದ ಚೆಕ್‌ ಪಡೆದಿದ್ದಾಗಿ ನಟಿ ಈ ಹಿಂದೆ ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲ ತನ್ನ ಮೊದಲ ಟಿವಿ ಜಾಹೀರಾತನ್ನು ಪಡೆಯುವ ಮೊದಲು ಅವರು 100 ಬಾರಿ ರಿಜೆಕ್ಟ್ ಆಗಿದ್ದಾಗಿ ಹೇಳಿದ್ದರು.

ಪ್ರಿಯಾಬಾಪಟ್ ಕಕ್ಸ್ ಪರ್ಶ್, ಆಮ್ಹಿ ದೋಘಿ, ಟೈಂಪಾಸ್ 2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಟಿವಿ ಶೋಗಳು ಮತ್ತು ರಫುಚಕ್ಕರ್, ಸಿಟಿ ಆಫ್ ಡ್ರೀಮ್ಸ್ ನಂತಹ ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಪ್ರಿಯಾ ಬಾಪಟ್ ಈಗ ಫರ್ದೀನ್ ಖಾನ್, ರಿತೇಶ್ ದೇಶಮುಖ್ ಮತ್ತು ಇತರರೊಂದಿಗೆ ನಟಿಸಿರುವ ವಿಸ್‌ಫೊಟ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಇದೇ ವರ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...