alex Certify BIG NEWS: ಡ್ರಗ್ ಪೆಡ್ಲರ್ ಜೊತೆ ಮತ್ತೆ ಕಿರುತೆರೆ-ಚಲನಚಿತ್ರ ನಟ-ನಟಿಯರ ನಂಟು; ಸ್ಫೋಟಕ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡ್ರಗ್ ಪೆಡ್ಲರ್ ಜೊತೆ ಮತ್ತೆ ಕಿರುತೆರೆ-ಚಲನಚಿತ್ರ ನಟ-ನಟಿಯರ ನಂಟು; ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಡ್ರಗ್ಸ್ ಪೆಡ್ಲರ್ ಗಳ ಜೊತೆ ಕಿರುತೆರೆಯ ನಟ-ನಟಿಯರು, ಚಲನಚಿತ್ರರಂಗದ ನಟ-ನಟಿಯರು ನಂಟು ಹೊಂದಿರುವ ಬಗ್ಗೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ಡ್ರಗ್ಸ್ ಪೆಡ್ಲರ್ ಗಳ ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಡ್ರಗ್ಸ್ ಕೇಸ್ ನಲ್ಲಿ ಈ ಹಿಂದೆ ಸ್ಯಾಂಡಲ್ ವುಡ್ ನಟ-ನಟಿಯರ ಹೆಸರು ಕೇಳಿಬಂದಿತ್ತು. ಈ ವೇಳೆ ಕೆಲ ನಟ ನಟಿಯರನ್ನು ವಿಚಾರಣೆ ನಡೆಸಲಾಗಿತ್ತು.

ಆದರೆ ಈಗ ಮತ್ತೆ ಡ್ರಗ್ಸ್ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರ ಹೆಸರು ಕೇಳಿಬಂದಿದೆ. ಪೆಡ್ಲರ್ ಮೊಬೈಲ್ ಪರಿಶೀಲನೆ ವೇಳೆ ನಟ-ನಟಿಯರ ನಂಟು ಇರುವುದು ಬಯಲಾಗಿದೆ.

ಇತ್ತೀಚೆಗೆ ಸಿಸಿಬಿ ಪೊಲೀಸರು ರಾಮಮೂರ್ತಿ ನಗರದ ಮನೆಯಲ್ಲಿ ದಾಳಿ ನಡೆಸಿ 21 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದರು. ಪ್ರಕರಣದಲ್ಲಿ ವಿದೇಶಿ ಡ್ರಗ್ ಪೆಡ್ಲರ್ ಲಿಯೋನಾರ್ಡ್ ಎಂಬಾತನನ್ನು ಬಂಧಿಸಲಾಗಿತ್ತು. ಹೊಸ ವರ್ಷದ ಸಂದರ್ಭದಲ್ಲಿ ಡ್ರಗ್ಸ್ ಮಾರಲು ಆರೋಪಿ ಬೃಹತ್ ಪ್ರಮಾಣದಲ್ಲಿ ಡ್ರಗ್ಸ್ ಶೇಖರಿಸಿಟ್ಟಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...