alex Certify ಗಿನ್ನಿಸ್ ದಾಖಲೆಗಾಗಿ ಮೆದುಳು ಧಿರಿಸಿನಲ್ಲಿ ಮ್ಯಾರಥಾನ್ ಓಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನಿಸ್ ದಾಖಲೆಗಾಗಿ ಮೆದುಳು ಧಿರಿಸಿನಲ್ಲಿ ಮ್ಯಾರಥಾನ್ ಓಟ…!

ಮಾನವನ ಮೆದುಳನ್ನು ಹೋಲುವ ಧಿರಿಸು ಧರಿಸಿ ಬ್ರಿಟಿಷ್ ಓಟಗಾರನೊಬ್ಬ ಲಂಡನ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡು ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿ ಹೊಂದಿದ್ದಾನೆ.
ಬ್ರಿಟಿಷ್ ಓಟಗಾರ ಬ್ರೈಸ್ ಆಲ್ಫೋರ್ಡ್ ಎಂಬವರು ಚಾರಿಟಿಯೊಂದರ ನಿಧಿ ಸಂಗ್ರಹ ವ್ಯವಸ್ಥಾಪಕರಾಗಿದ್ದಾರೆ.

ಇಂಗ್ಲೆಂಡ್ ಬೀದಿಗಳಲ್ಲಿ ಅವರು ಪೂರ್ಣ ದೇಹದ ಮೆದುಳಿನ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಗಿನ್ನಿಸ್ ದಾಖಲೆಯ ಗುರಿ ಹೊಂದಿದ್ದು, ಲಂಡನ್ ಮ್ಯಾರಥಾನ್ ನಲ್ಲಿ ಮೆದುಳಿನ ಉಡುಪು ತೊಟ್ಟು ಓಡಲಿದ್ದಾರೆ.

ಪೊಲೀಸ್ ಅಧಿಕಾರಿಗಳೊಂದಿಗೆ ಈ ಉಡುಪು ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಪೊಲೀಸರು ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.

BIG NEWS: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಸಂತ್ರಸ್ತೆ ಪರ ವಕೀಲೆ ಅನಾರೋಗ್ಯ; ವಿಚಾರಣೆ ಮುಂದೂಡಿಕೆ

ಅಕ್ಟೋಬರ್ 3ರಂದು ಬ್ರೈಸ್ ಲಂಡನ್ ಮ್ಯಾರಥಾನ್ ನಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ 20 ವರ್ಷಗಳಲ್ಲಿ ಬ್ರೈಸ್ ಚಾರಿಟಿಗಾಗಿ 1,50,000 ಪೌಂಡ್ ಗಿಂತ ಹೆಚ್ಚು ಹಣ ಸಂಗ್ರಹಿಸಿದ್ದಾರೆ. ಬ್ರೈಸ್ ಧರಿಸಿರುವ ಉಡುಪು 7 ಕೆ.ಜಿ. ತೂಕ ಹೊಂದಿದೆ. ಹಾಗೂ ಮಾನವನ ಮೆದುಳಿನ ದೈತ್ಯ ಪ್ರತಿರೂಪದಂತೆ ಕಾಣುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...