alex Certify ಹಾಲಿನ ಬೆಲೆ ಲೀಟರ್‌ಗೆ 210 ರೂ.; ಕೆಜಿ ಅಕ್ಕಿಯ ಬೆಲೆ 400 ರೂ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ ಪಾಕ್ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಿನ ಬೆಲೆ ಲೀಟರ್‌ಗೆ 210 ರೂ.; ಕೆಜಿ ಅಕ್ಕಿಯ ಬೆಲೆ 400 ರೂ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ ಪಾಕ್ ಜನ…!

 

ಪಾಕಿಸ್ತಾನದ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. ಅಲ್ಲಿನ ಜನರು ಸಾಲ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಹಣದುಬ್ಬರ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ ಅಗತ್ಯ ಆಹಾರ ಪದಾರ್ಥಗಳು ಕೂಡ ಜನರ ಕೈಗೆಟುಕದಂತಾಗುತ್ತಿವೆ. ಜನರ ತಟ್ಟೆಯಿಂದ ರೊಟ್ಟಿ, ಮಕ್ಕಳ ಬಾಯಿಯಿಂದ ಹಾಲು ಕಿತ್ತುಕೊಂಡಿದೆ ಅಲ್ಲಿನ ಸರ್ಕಾರ.

ಸಾಲದ ಹೊರೆಯಲ್ಲಿರುವ ಪಾಕಿಸ್ತಾನದಲ್ಲಿ ಗೋಧಿ ಹಿಟ್ಟು, ಅಕ್ಕಿ ಮತ್ತು ಹಾಲಿನ ಬೆಲೆ ಗಗನಕ್ಕೇರಿದೆ. ಭಾರತದಲ್ಲಿ ಹಾಲಿನ ಬೆಲೆ ಲೀಟರ್‌ಗೆ 50-60 ರೂಪಾಯಿ ಇದೆ, ಆದರೆ ಪಾಕಿಸ್ತಾನದಲ್ಲಿ ಲೀಟರ್‌ಗೆ 210 ರೂಪಾಯಿಗೆ ತಲುಪಿದೆ. ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆ 800 ರೂಪಾಯಿ ಆದ್ರೆ ಒಂದು ಕೆಜಿ ಅಕ್ಕಿಯ ಬೆಲೆ 400 ರೂಪಾಯಿ.

ಈಗಾಗಲೇ ಹಾಲಿನ ದರ ಗಗನಕ್ಕೇರಿದ್ದರೂ ಸರ್ಕಾರ ಹೈನುಗಾರರ ಸಂಘದ ಬೇಡಿಕೆಗಳಿಗೆ ಹಸಿರು ನಿಶಾನೆ ತೋರಿದೆ, ಮುಂದಿನ ದಿನಗಳಲ್ಲಿ ಹಾಲಿನ ದರ ಇನ್ನೂ 50 ರೂಪಾಯಿ ಹೆಚ್ಚಾಗಬಹುದು. ಉಳಿದಂತೆ ಬಾಳೆಹಣ್ಣು, ಸೇಬಿನ ಬೆಲೆಯಲ್ಲಿ ಸಹ ಭಾರೀ ಏರಿಕೆಯಾಗಿದೆ.

ಪಾಕಿಸ್ತಾನದಲ್ಲಿ ಹಣದುಬ್ಬರವು ಗರಿಷ್ಠ ಮಟ್ಟವನ್ನು ತಲುಪುತ್ತಿದೆ. ಮೇ 2023 ರಲ್ಲಿ, ಪಾಕಿಸ್ತಾನದ ಹಣದುಬ್ಬರ ದರವು 38 ಪ್ರತಿಶತವನ್ನು ದಾಟಿತ್ತು. ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಪಾಕಿಸ್ತಾನದಲ್ಲಿ ಆಹಾರ ಪದಾರ್ಥಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಪಾಕಿಸ್ತಾನದ ನಗರ ಪ್ರದೇಶಗಳಲ್ಲಿ ಟೊಮೆಟೊ ಬೆಲೆ ಶೇ.188, ಈರುಳ್ಳಿ ಶೇ.84, ಮಸಾಲೆ ಪದಾರ್ಥ ಶೇ.49, ಸಕ್ಕರೆ ಶೇ.37ರಷ್ಟು ದುಬಾರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...