alex Certify ಮೆಟ್ರೋ ಹಳಿ ಪಕ್ಕ ಸಲೀಸಾಗಿ ಹೋದ ಭೂಪ…! ವಿಡಿಯೋ ನೋಡಿ ಹೌಹಾರಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋ ಹಳಿ ಪಕ್ಕ ಸಲೀಸಾಗಿ ಹೋದ ಭೂಪ…! ವಿಡಿಯೋ ನೋಡಿ ಹೌಹಾರಿದ ಜನ

ಸಾಮಾನ್ಯವಾಗಿ ಮೆಟ್ರೋ ಸಾಗುವ ಮಾರ್ಗದ ಅಕ್ಕಪಕ್ಕದಲ್ಲಿ ಜನರ ಓಡಾಟಕ್ಕೆ ಅವಕಾಶ ಇರುವುದಿಲ್ಲ. ವಿದ್ಯುತ್​ ಅಪಾಯ ಮತ್ತು ಮೆಟ್ರೋದ ವೇಗ ಇದಕ್ಕೆ ಕಾರಣ. ಆ ಜಾಗವನ್ನು ಓಡಾಟ ನಿಷೇಧ ಎಂದೇ ಘೋಷಿಸಿ ನಿರ್ಬಂಧಿಸಲಾಗಿರುತ್ತದೆ. ಅಂಥದ್ದರಲ್ಲಿ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುವುದನ್ನು ಕಂಡ ಜನರು ಗಾಬರಿಗೊಂಡ ಪ್ರಸಂಗ ದೆಹಲಿಯಲ್ಲಿ ನಡೆದಿದೆ. ವೈರಲ್​ ಆದ ವಿಡಿಯೊ ಕೂಡ 11 ಮಿಲಿಯನ್​ ವೀಕ್ಷಣೆ ಕಂಡಿದೆ.

ಪಶ್ಚಿಮ ದೆಹಲಿಯ ನಂಗ್ಲೋಯ್​ ಮೆಟ್ರೋ ನಿಲ್ದಾಣದ ಹಳಿಗಳ ಮೇಲೆ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಅದೇ ರೀತಿಯ ವಿಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ.

ಕಿರು ವಿಡಿಯೋ ಕ್ಲಿಪ್​ನಲ್ಲಿ, ಒಬ್ಬ ವ್ಯಕ್ತಿ ನಂಗ್ಲೋಯ್​ನ ಮೆಟ್ರೋ ನಿಲ್ದಾಣದ ಹಳಿಗಳ ಮೇಲೆ ನಡೆಯುತ್ತಿರುವುದು, ಕೆಳಗೆ ಜನರ ದೊಡ್ಡ ಗುಂಪೊಂದು ಜೋರಾಗಿ ಕೂಗುವುದು ಮತ್ತು ಶಿಳ್ಳೆ ಹೊಡೆಯುವುದನ್ನು ಕಾಣಬಹುದು. ಆ ವ್ಯಕ್ತಿ ಜನರ ಕೂಗಿಗೆ ಸ್ಪಂದಿಸದೇ ನಿರ್ಲಕ್ಷಿಸಿ ಸಾಗುವುದು ಕಾಣಿಸುತ್ತದೆ.

ವಿಡಿಯೊವು ತ್ವರಿತವಾಗಿ ಹೆಚ್ಚಿನ ಜನರ ಗಮನ ಸೆಳೆಯಿತು. ಸಾವಿರಾರು ನೆಟ್ಟಿಗರು ಕಾಮೆಂಟ್​ ಮಾಡಿದ್ದು ಕೆಲವರು ಆತಂಕ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಹಾಸ್ಯ ಮಾಡಿದ್ದಾರೆ. ಒಬ್ಬರಂತೂ “ಊಟದ ನಂತರ ಮಧ್ಯಾಹ್ನದ ನಡಿಗೆ” ಎಂದು ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...