alex Certify ಟ್ರೆಡ್​ಮಿಲ್​ನಲ್ಲಿ ವ್ಯಾಯಾಮದ ಬದಲು ನೃತ್ಯ ಮಾಡಿದ ಯುವಕ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೆಡ್​ಮಿಲ್​ನಲ್ಲಿ ವ್ಯಾಯಾಮದ ಬದಲು ನೃತ್ಯ ಮಾಡಿದ ಯುವಕ: ವಿಡಿಯೋ ವೈರಲ್

ಜಿಮ್​ಗಳಲ್ಲಿ ಟ್ರೆಡ್​ಮಿಲ್ ಇರುವುದು ವ್ಯಾಯಾಮ ಮಾಡಲು. ಆದರೆ ಇಲ್ಲೊಬ್ಬ ಯುವಕ ಟ್ರೆಡ್​ಮಿಲ್​ ಮಾಡುತ್ತಲೇ ನೃತ್ಯ ಮಾಡುತ್ತಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೈ ರಾಮಾ ಎಂಬ ಬಾಡಿವುಡ್​ ಹಾಡಿಗೆ ಈ ಯುವಕ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲೋಕ್ ಶರ್ಮಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ವಿವಿಧ ಹಾಡುಗಳಿಗೆ ನೃತ್ಯ ಮಾಡುವ ವಿಡಿಯೋಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುವ ಶರ್ಮಾ ಅವರ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬಾರಿ 1995ರಲ್ಲಿ ತೆರೆಕಂಡ ರಂಗೀಲಾ ಚಿತ್ರದ ಹಾಡಿಗೆ ಹೆಜ್ಜೆ ಹಾಕಿರುವುದಕ್ಕೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ 30 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಹಲವಾರು ಮಂದಿ ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...