alex Certify ಮಾಡಿ ಸವಿಯಿರಿ ರುಚಿಕರ ʼಗೀ ರೈಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡಿ ಸವಿಯಿರಿ ರುಚಿಕರ ʼಗೀ ರೈಸ್ʼ

ದಿನಾ ಒಂದೇ ರೀತಿ ಅಡುಗೆ ಮಾಡಿ ಬೇಜಾರಾಗಿದ್ದರೆ ಅಥವಾ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ಗೀ ರೈಸ್ ಮಾಡಿ. ಮಾಡುವುದಕ್ಕೂ ಸುಲಭ ತಿನ್ನಲು ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:

¼ ಕಪ್ ಹಸಿ ಬಟಾಣಿ, 4 – ಹಸಿಮೆಣಸು, ಈರುಳ್ಳಿ – 1, ಚಕ್ಕೆ – 1 ಪೀಸ್, ಸೋಂಪು – 1 ಟೀ ಸ್ಪೂನ್, ಏಲಕ್ಕಿ – 2, ಲವಂಗ – 5, ಪಲಾವ್ ಎಲೆ – 1, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಅಕ್ಕಿ – 1 ಲೋಟ, ತೆಂಗಿನಕಾಯಿ ಹಾಲು – 1 ಲೋಟ, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ – 2 ಚಮಚ, ಎಣ್ಣೆ – 2 ಚಮಚ, ಗೋಡಂಬಿ – 1 ಚಮಚ.

ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು ½ ಗಂಟೆ ನೆನೆಸಿ ಇಡಿ. ಮೊದಲಿಗೆ ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ.

ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ನಂತರ ಹಸಿಮೆಣಸು ಸೇರಿಸಿ ಬಳಿಕ ತೆಂಗಿನಕಾಯಿ ಹಾಲು, 1 ಲೋಟ ನೀರು ಹಾಕಿ ಕುದಿಸಿ. ಇದಕ್ಕೆ ಅಕ್ಕಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೇಲೆ ಒಂದು ಚಮಚ ತುಪ್ಪ ಹಾಕಿ 2 ವಿಷಲ್ ಕೂಗಿಸಿಕೊಳ್ಳಿ. ಒಂದು ಚಮಚ ತುಪ್ಪ ಹಾಕಿ ಗೋಡಂಬಿ ಕರಿದು ರೈಸ್‌ ಗೆ ಬೆರೆಸಿ ಸರ್ವ್‌ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...