alex Certify ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಮದಗಜ’ ಸಿನಿಮಾದ ಮೊದಲ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಮದಗಜ’ ಸಿನಿಮಾದ ಮೊದಲ ಹಾಡು

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷೆಯ ‘ಮದಗಜ’ ಸಿನಿಮಾದ ಮೊದಲನೇ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಗೆಳೆಯ ನನ್ನ ಗೆಳೆಯ’ ಎಂಬ ಈ ಹಾಡಿಗೆ ವೈಶ್ ಎಂಬುವವರು ಧ್ವನಿಯಾಗಿದ್ದಾರೆ.

ಭಾರತದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದು ಚೇತನ್ ಕುಮಾರ್ ಸಾಹಿತ್ಯವಿದೆ.

ರೈತರಿಗೊಂದು ಮಹತ್ವದ ಮಾಹಿತಿ: ಈ ದಾಖಲೆ ನೀಡದೆ ಹೋದರೆ ಸಿಗಲ್ಲ ʼಪಿಎಂ ಕಿಸಾನ್ʼ ಯೋಜನೆ ಹಣ

ಈ ಹಾಡು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಗಾನಪ್ರಿಯರ ಗಮನ ಸೆಳೆದಿದೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಈ ಚಿತ್ರದಲ್ಲಿ ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ.

ಚಿಕ್ಕಣ್ಣ ಹಾಗೂ ಟಾಲಿವುಡ್ ನ ಖ್ಯಾತ ಖಳನಾಯಕ ಜಗಪತಿ ಬಾಬು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಈಗಾಗಲೇ ಈ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...