alex Certify ರೈತರಿಗೊಂದು ಮಹತ್ವದ ಮಾಹಿತಿ: ಈ ದಾಖಲೆ ನೀಡದೆ ಹೋದರೆ ಸಿಗಲ್ಲ ʼಪಿಎಂ ಕಿಸಾನ್ʼ ಯೋಜನೆ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೊಂದು ಮಹತ್ವದ ಮಾಹಿತಿ: ಈ ದಾಖಲೆ ನೀಡದೆ ಹೋದರೆ ಸಿಗಲ್ಲ ʼಪಿಎಂ ಕಿಸಾನ್ʼ ಯೋಜನೆ ಹಣ

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಲಾಭ ಪಡೆಯುತ್ತಿದ್ದರೆ ಅಂಥವರಿಗೊಂದು ಮಹತ್ವದ ಮಾಹಿತಿಯಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಕೃಷಿ ಭೂಮಿ ಯಾರ ಹೆಸರಿನಲ್ಲಿದೆಯೋ ಆ ರೈತರಿಗೆ ಮಾತ್ರ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಲಾಭ ಸಿಗಲಿದೆ. ಪೂರ್ವಜರ ಭೂಮಿಯಲ್ಲಿ ಪಾಲುದಾರರಾಗಿದ್ದರೆ ಅಂಥವರಿಗೆ ಈ ಯೋಜನೆ ಲಾಭ ಸಿಗಲು ಸಾಧ್ಯವಿಲ್ಲ.

BIG NEWS: ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಧಾವಿಸುವವರಿಗೆ ಕೇಂದ್ರದಿಂದ ನಗದು ಪುರಸ್ಕಾರ

2019 ರಲ್ಲಿ ಪ್ರಾರಂಭವಾದ ಯೋಜನೆಯಲ್ಲಿ ಕೆಲವೊಂದು ದೋಷಗಳು ಕಂಡು ಬಂದಿದ್ದವು. ಇದನ್ನು ಸರ್ಕಾರ ಸರಿಪಡಿಸುತ್ತಿದೆ. ಈ ಯೋಜನೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹೊಸ ನೋಂದಣಿ ಮಾಡಿದ ರೈತರು, ಈಗ ತಮ್ಮ ಜಮೀನಿನ ಪ್ಲಾಟ್ ಸಂಖ್ಯೆಯನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕಾಗುತ್ತದೆ. ಹೊಸ ನಿಯಮಗಳು ಹಳೆ ಫಲಾನುಭವಿಗಳಿಗೆ ಅನ್ವಯಿಸುವುದಿಲ್ಲ.

ಕೆಲಸದ ನಿರೀಕ್ಷೆಯಲ್ಲಿದ್ದ ಪದವೀಧರ ಕನ್ನಡಿಗರಿಗೆ ಗುಡ್ ನ್ಯೂಸ್: 5830 ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲೇ ಪರೀಕ್ಷೆ, ಇಂದಿನಿಂದಲೇ ಅರ್ಜಿ ಸಲ್ಲಿಕೆ

ಪ್ರತಿ ಹಣಕಾಸು ವರ್ಷದಲ್ಲಿ 6 ಸಾವಿರ ರೂಪಾಯಿಯನ್ನು ರೈತರಿಗೆ ನೀಡಲಾಗುತ್ತಿದೆ. ಮೂರು ಕಂತುಗಳಲ್ಲಿ 2 ಸಾವಿರದಂತೆ ಹಣವನ್ನು ರೈತರ ಖಾತೆಗೆ ಹಾಕಲಾಗ್ತಿತ್ತು. ಆದ್ರೆ ಈ ಮೊತ್ತವನ್ನು ಸರ್ಕಾರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಒಂದು ವೇಳೆ ಸರ್ಕಾರ ಈ ಮೊತ್ತವನ್ನು ಹೆಚ್ಚಿಸಿದ್ರೆ ವಾರ್ಷಿಕ 6 ಸಾವಿರದ ಬದಲು 12ಸಾವಿರ ರೂಪಾಯಿ ರೈತರಿಗೆ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...