alex Certify ‘ಟಾಕಿಂಗ್‌ ಟು ದಿ ಮೂನ್‌ ‘ ಎಂದು ಮುದ್ದಾಗಿ ಹಾಡಿದ ಪೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಟಾಕಿಂಗ್‌ ಟು ದಿ ಮೂನ್‌ ‘ ಎಂದು ಮುದ್ದಾಗಿ ಹಾಡಿದ ಪೋರಿ

ಈ ಹಿಂದೆ 3 ವರ್ಷದ ಲಿಲಾ ಯಿಲ್‌ಮಾಜ್‌ ಹಾಡಿದ್ದ ಕವರ್‌ ಮೀ ಇನ್‌ ಸನ್‌ಶೈನ್‌ ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅದಕ್ಕೆ ಕಾರಣ ಎರಡು ಜಡೆಯ ಪೋರಿಯ ಮುದ್ದಾದ ಮುಖ ಮತ್ತು ಹಾವಭಾವಗಳು. ಅದೇ ಬಾಲಕಿ ಈಗ ‘ಟಾಕಿಂಗ್‌ ಟು ದಿ ಮೂನ್‌’ ಎಂಬ ಹಾಡು ಹಾಡಿ ಮತ್ತೊಮ್ಮೆ ನೆಟ್ಟಿಗರ ಮನಸೂರೆಗೊಳಿಸಿದ್ದಾಳೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈಕೆಯ ಹಾಡು ವೈರಲ್‌ ಆಗಿದೆ. ಫ್ರಾಕ್‌ ತೊಟ್ಟಿರುವ ಬಾಲಕಿಯು ಮನೆಯ ಬಾಲ್ಕನಿಯಲ್ಲಿ ನಿಂತು, ಮುದ್ದಾಗಿ ಹಾಡಿದ ಕೊನೆಯಲ್ಲಿ ರೆಕಾರ್ಡ್‌ ಮಾಡುತ್ತಿದ್ದ ತಾಯಿಯ ಬಳಿ ಹೋಗಿ, ’ಅಮ್ಮಾ ನನ್ನ ಹಾಡನ್ನು ಹಕ್ಕಿಗಳು ಇಷ್ಟಪಡುತ್ತವೆ,’ ಎಂದಿರುವ ಮುಗ್ಧತೆಗೆ ಮಾರುಹೋದವರು ಲಕ್ಷಾಂತರ ನೆಟ್ಟಿಗರು.

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ

ಮಕ್ಕಳನ್ನು ಹೆತ್ತಿರುವ ಪ್ರತಿಯೊಬ್ಬರೂ ಕೂಡ ಅವರ ಮುದ್ದು ಆಟಗಳೇ ವಿಶ್ವದಲ್ಲಿ ಅತ್ಯಂತ ವಿಶಿಷ್ಟವಾದ ಸಂಗತಿ ಎಂದು ಅರಿಯಬೇಕು. ಆಗ ಮಾತ್ರವೇ ಅದನ್ನು ಪೂರ್ಣವಾಗಿ ಅನುಭವಿಸಲು ಸಾಧ್ಯ ಎಂದು ಲಿಲಾ ತಾಯಿಯು ಪೋಸ್ಟ್‌ ಬರಹದಲ್ಲಿ ಹಾಕಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

https://www.instagram.com/p/CTjuP8CJgWe/?utm_source=ig_embed&utm_campaign=embed_video_watch_again

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...