alex Certify ಲ್ಯಾಪ್ಸ್ ಆಗಿರುವ LIC ಪಾಲಿಸಿಗೆ ಮರುಜೀವ ತುಂಬುವುದು ಹೇಗೆ…? ನಿಮಗಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್ಸ್ ಆಗಿರುವ LIC ಪಾಲಿಸಿಗೆ ಮರುಜೀವ ತುಂಬುವುದು ಹೇಗೆ…? ನಿಮಗಿರಲಿ ಈ ಮಾಹಿತಿ

ಜೀವ ವಿಮಾ ಪಾಲಿಸಿ (ಎಲ್‌ಐಸಿ) ಸ್ಕೀಂಗೆ ಸಹಿ ಮಾಡಿದಲ್ಲಿ ನೀವು ಪ್ಲಾನ್ ಪ್ರಕಾರ ನಿಮ್ಮ ಪ್ರೀಮಿಯಂಗಳನ್ನು ಸಕಾಲದಲ್ಲಿ ಕಟ್ಟಿಕೊಂಡು ಹೋಗುತ್ತಲೇ ಇರಬೇಕು. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಬಹಳಷ್ಟು ಮಂದಿ ಸ್ಕೀಂ ಮೇಲೆ ಹೂಡಿಕೆ ಮಾಡಲು ವಿಫಲರಾಗಿ ಪಾಲಿಸಿ ಕುಸಿಯುತ್ತದೆ.

ಇಂಥ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಎಲ್‌ಐಸಿ ಕೊಡಮಾಡುವ ಆಯ್ಕೆಗಳನ್ನು ಅನುಸರಿಸಿ ನಿಮ್ಮ ವಿಮಾ ಪಾಲಿಸಿಗೆ ಮರುಜೀವ ತುಂಬಬಹುದು. ಆದರೆ ಇದು ಕೊಂಚ ದುಬಾರಿ ವಿಚಾರ.

ಸಾಮಾನ್ಯ ಮರುಪೂರಣ ಪಾಲಿಸಿ

ಈ ನಿಯಮದಡಿ, ಲ್ಯಾಪ್ಸ್ ಆದ ನಿಮ್ಮ ವಿಮೆಯನ್ನು ಆರು ತಿಂಗಳ ಒಳಗೆ ಮರುಜೀವ ಕೊಟ್ಟುಕೊಳ್ಳಬಹುದಾಗಿದೆ. ಆದರೆ ಇದಕ್ಕಾಗಿ ನೀವು ಪ್ರೀಮಿಯಂ ಜೊತೆಗೆ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.

ವೈದ್ಯಕೀಯ ಆಧಾರದ ಮರುಪೂರಣ

ಪಾಲಿಸಿ ಅವಧಿಯಲ್ಲಿ ಹೂಡಿಕೆದಾರರು ಈ ಮರುಜೀವದ ಪ್ಲಾನ್ ‌ಅನ್ನು ಒಮ್ಮೆ ಬಳಸಬಹುದಾಗಿದೆ. ಈ ಪ್ಲಾನ್ ಅಡಿ ಬರುವ ವೈದ್ಯಕೀಯ ಅಗತ್ಯಗಳನ್ನು ಎಲ್‌ಐಸಿ ನಿರ್ಧರಿಸಲಿದ್ದು, ಮರುಪೂರಣ ಮಾಡಬೇಕಾದ ಮೊತ್ತವನ್ನು ನಿರ್ಧರಿಸುತ್ತದೆ.

ವಿಶೇಷ ಮರುಪೂರಣ ಸ್ಕೀಂ

ಈ ನಿಯಮದಡಿ ಹೂಡಿಕೆದಾರರು ವಯಸ್ಸಿಗನುಸಾರವಾಗಿ ಮರುಪೂರಣದ ಅವಧಿಯಲ್ಲಿ ಹೂಡಿಕೆದಾರರು ಸಿಂಗಲ್ ಪ್ರೀಮಿಯಂ ಕಟ್ಟಬೇಕು. ಪೂರ್ಣ ಪ್ರೀಮಿಯಂ ಕಟ್ಟಿದ ಮೇಲೆಯೇ ಈ ವಿಶೇಷ ಮರುಪೂರಣ ಪ್ಲಾನ್ ‌ಅನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಆರೋಗ್ಯವಂತರಾಗಿದ್ದೀರೆಂದು ವೈದ್ಯಕೀಯ ದಾಖಲೆಗಳ ಸಮೇತ ಸಾಬೀತುಪಡಿಸಬೇಕು.

ಕಂತು ಮರುಪೂರಣ ಸ್ಕೀಂ

ಈ ಸ್ಕೀಂನಡಿ ಪಾಲಿಸಿ ಲ್ಯಾಪ್ಸ್‌ ಆಗದಂತೆ ಹೂಡಿಕೆದಾರರಿಗೆ ಬಾಕಿಯನ್ನು ಕಂತುಗಳಲ್ಲಿ ಪಾವತಿ ಮಾಡಲು ಅವಕಾಶ ನೀಡಲಾಗುತ್ತದೆ.

ಸಾಲ ಕಂ ಮರುಪೂರಣ ಸ್ಕೀಂ

ಅದಾಗಲೇ ಹೂಡಿಕೆ ಮಾಡಿರುವ ತಮ್ಮದೇ ದುಡ್ಡಿನಿಂದ ಸಾಲ ಪಡೆಯುವ ಮೂಲಕ ಹೂಡಿಕೆದಾರರು ಪ್ರೀಮಿಯಂ ಬಾಕಿ ಕಟ್ಟಲು ಅವಕಾಶವನ್ನು ಈ ಸ್ಕೀಂ ಕೊಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...