alex Certify ಹಸುಗಳ ಮೇಲೆ ವಿಕೃತ ಲೈಂಗಿಕ ದೌರ್ಜನ್ಯ, ಹಿಂಸೆ: ರೈತರಿಂದ ಜಾನುವಾರು ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುಗಳ ಮೇಲೆ ವಿಕೃತ ಲೈಂಗಿಕ ದೌರ್ಜನ್ಯ, ಹಿಂಸೆ: ರೈತರಿಂದ ಜಾನುವಾರು ಮಾರಾಟ

ಕೇರಳದ ಕೊಲ್ಲಂ ಜಿಲ್ಲೆಯ ಮಯ್ಯನಾಡ್ ಪ್ರದೇಶದಲ್ಲಿ ಹಸುಗಳ ಮೇಲೆ ವ್ಯಕ್ತಿಯೊಬ್ಬ ವಿಕೃತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಇದರಿಂದ ಬೇಸತ್ತ ರೈತರು ಜಾನುವಾರುಗಳನ್ನು ಮಾರಾಟ ಮಾಡತೊಡಗಿದ್ದಾರೆ.

ಕಳೆದ ಜನವರಿಯಿಂದ ಊರಿನ ವ್ಯಕ್ತಿಯೊಬ್ಬ ಕೊಟ್ಟಿಗೆಯಲ್ಲಿರುವ ಹಸುಗಳಿಗೆ ವಿಕೃತ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಗುದದ್ವಾರಕ್ಕೆ ಕೋಲು ತುರುಕಿ ಹಿಂಸೆ ನೀಡಿದ್ದಲ್ಲದೆ, ಹಾಲು ಕರೆಯುವ ಹಸುಗಳ ಸ್ತನಗಳಿಗೆ ಕಲ್ಲುಗಳಿಂದ ಜಜ್ಜಿ ಹಿಂಸೆ ನೀಡಿದ್ದಾನೆ ಎಂದು ಹೇಳಲಾಗಿದೆ.

ರೈತರ ಮೇಲಿನ ವೈಯಕ್ತಿಕ ದ್ವೇಷದಿಂದ ಜಾನುವಾರುಗಳಿಗೆ ಹಿಂಸೆ ನೀಡುತ್ತಿದ್ದು, ಜಾನುವಾರುಗಳ ಮೇಲಿನ ದೌರ್ಜನ್ಯ ಸಹಿಸದೆ ರೈತರು ಜಾನುವಾರುಗಳನ್ನು ಮಾರಾಟ ಮಾಡತೊಡಗಿದ್ದಾರೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಪಶು ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ. ಆದರೆ, ಹಸುಗಳು ಹಿಂಸೆ ಅನುಭವಿಸುವುದು ಬೇಡವೆಂದು ಹೈನುಗಾರರು ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಇನ್ನು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೊಟ್ಟಿಗೆಯಲ್ಲಿರುವ ಜಾನುವಾರುಗಳಿಗೆ ವಿಕೃತ ಈ ರೀತಿ ಮಾಡುತ್ತಿದ್ದಾನೆ ಎಂದು ಕೆಲವು ದಿನಗಳ ಹಿಂದೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಸಾಕಷ್ಯವಿಲ್ಲ ಎಂದು ಆತನನ್ನು ಬಿಟ್ಟು ಕಳಿಸಲಾಗಿದೆ. ಆದರೆ, ರೈತರು ಒಪ್ಪಿಸಿದ್ದ ವ್ಯಕ್ತಿ ಮಾನಸಿ ಅಸ್ವಸ್ಥ ಎಂದು ಪೊಲೀಸರು ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...