alex Certify ಗೆಳತಿ ಮಾತು ನಂಬಿ ಬೆತ್ತಲಾದ ಯುವಕ, ಆಗಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿ ಮಾತು ನಂಬಿ ಬೆತ್ತಲಾದ ಯುವಕ, ಆಗಿದ್ದೇನು ಗೊತ್ತಾ..?

ಬೆಂಗಳೂರು: ಸ್ನೇಹಿತನಿಗೆ ವಿಡಿಯೋ ಕಾಲ್ ಮಾಡಿದ ಯುವತಿ ಬೆತ್ತಲಾಗಿ ನೋಡಬೇಕೆಂದು ಹೇಳಿದ್ದಾಳೆ. ಆಕೆಯ ಮಾತು ನಂಬಿದ ಯುವಕ ಬೆತ್ತಲಾಗಿದ್ದು ಅದೇ ವಿಡಿಯೋ ಇಟ್ಟುಕೊಂಡ ಯುವತಿ ಬ್ಲಾಕ್ಮೇಲ್ ಮಾಡಿ 22 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದಾಳೆ. ಇದರಿಂದ ಕಂಗಾಲಾದ ಯುವಕ ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾನೆ.

ದೊಡ್ಡನೆಕ್ಕುಂದಿ ಬಳಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ಯುವಕ ಲಾಕ್ ಡೌನ್ ಕಾರಣದಿಂದ ಮನೆಯಲ್ಲೇ ಉಳಿದುಕೊಂಡಿದ್ದಾನೆ. ಆಪ್ ಮೂಲಕ ಯುವತಿ ಸಂಪರ್ಕಿಸಿದ್ದು ಇಬ್ಬರು ಫೋನ್ ನಂಬರ್ ವಿನಿಮಯ ಮಾಡಿಕೊಂಡು ಸ್ನೇಹಿತರಾಗಿದ್ದಾರೆ.

ವಾಟ್ಸಾಪ್ ನಲ್ಲಿ ವಿಡಿಯೋ ಕಾಲ್ ಮಾಡಿದ್ದ ಯುವತಿ ಬೆತ್ತಲಾಗಿ ಕಾಣಿಸಿಕೊಳ್ಳುವಂತೆ ತಿಳಿಸಿದ್ದು, ಆಕೆಯ ಮಾತು ನಂಬಿದ ಯುವಕ ನಗ್ನವಾಗಿ ಕಾಣಿಸಿಕೊಂಡು ಸಂಭಾಷಣೆ ನಡೆಸಿದ್ದಾನೆ. ಈ ವೇಳೆ ಆತನಿಗೆ ಗೊತ್ತಾಗದಂತೆ ವಿಡಿಯೋ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದ ಯುವತಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಹಣ ಪಡೆದುಕೊಂಡಿದ್ದಾಳೆ. ಹಂತಹಂತವಾಗಿ ಹಣ ಪಡೆದು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಕಂಗಾಲಾದ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...