alex Certify ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಇದ್ದರೂ ಬದುಕುಳಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಇದ್ದರೂ ಬದುಕುಳಿದ ಶ್ವಾನ

ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಟಾಯ್ಲೆಟ್‌ ಒಂದಲ್ಲಿ ನಾಯಿಯೊಂದು ಸಿಲುಕಿಕೊಂಡಿದ್ದ ಘಟನೆ ಕರ್ನಾಟಕದ ಬಿಳಿನೆಲೆ ಗ್ರಾಮದಲ್ಲಿ ಘಟಿಸಿದೆ.

ನಾಯಿಯನ್ನು ಅಟ್ಟಿಸಿಕೊಂಡು ಚಿರತೆ ಬಂದಿದ್ದು, ಎರಡೂ ಸಹ ಶೌಚಾಲಯದಲ್ಲಿ ಸಿಕ್ಕಿ ಹಾಕಿಕೊಂಡಿವೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಎರಡೂ ಪ್ರಾಣಿಗಳನ್ನು ಟಾಯ್ಲೆಟ್‌ನಲ್ಲೇ ಲಾಕ್ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಗಮನಕ್ಕೆ ವಿಷಯ ತರಲಾಗಿದೆ. ಶೌಚಾಲಯದ ಕಿಟಕಿಯಿಂದ ಮೊಬೈಲ್‌ ಒಳಗೆ ಹಾಕಿ ಸೆರೆ ಹಿಡಿಯಲಾದ ಚಿತ್ರವೊಂದರಲ್ಲಿ ಚಿರತೆ ಹಾಗೂ ನಾಯಿಗಳು ಅಕ್ಕಪಕ್ಕ ಇರುವುದನ್ನು ನೋಡಬಹುದಾಗಿದೆ.

ಇಲ್ಲಿದೆ ನೋಡಿ ವಿಶ್ವದ ಅತಿ ಚಿಕ್ಕ ಗೋಸುಂಬೆ…!

ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಕೊಟ್ಟು ಅದನ್ನು ಮತ್ತೆ ಕಾಡಿಗೆ ಅಟ್ಟಲು ನೋಡಿದರಾದರೂ, ಚಿರತೆಯು ಮೇಲ್ಛಾವಣಿ ಮುಲಕ ತಪ್ಪಿಸಿಕೊಳ್ಳಲು ಸಫಲವಾಗಿದೆ. ಅಷ್ಟೂ ಅವಧಿಯಲ್ಲಿ ಚಿರತೆಯು ನಾಯಿಗೆ ಯಾವುದೇ ತೊಂದರೆ ಕೊಟ್ಟಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...